Vijaypura

ಬಿಸಿಲಿನ ತಾಪಕ್ಕೆ ಹೆದರಿ ಕಡಿಮೆಯಾದ ಪ್ರವಾಸಿಗರ ಸಂಖ್ಯೆ: ಪ್ರವಾಸಿ ತಾಣಗಳ ಬಳಿಯ ವ್ಯಾಪಾರಸ್ಥರ ಪರದಾಟ‌‌‌

Share

ಈ ಜಿಲ್ಲೆಯಲ್ಲಿ ಹಲವು ಐತಿಹಾಸಿಕ ಪ್ರವಾಸಿ ತಾಣಗಳಿವೆ, ಆದರೆ ಈಗ ಪ್ರವಾಸಿಗರು ಪ್ರವಾಸಿ ತಾಣಗಳತ್ತ ಬರುವ ಜನರ ಸಂಖ್ಯೆ ಭಾರೀ ಇಳಿಮುಖವಾಗಿದೆ, ಇದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದರೆ, ಇನ್ನೊಂದೆಡೆ ಪ್ರವಾಸಿಗರನ್ನೇ ನಂಬಿ ಜೀವನ‌ ನಡೆಸುವ ಬೀದಿ ಬದಿ ವ್ಯಾಪಾರಸ್ಥರು ಸಹಿತ ಪರದಾಡುವಂತಾಗಿದೆ‌. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಹಲವು ಐತಿಹಾಸಿಕ ಪ್ರವಾಸಿ ತಾಣಗಳಿವೆ. ವಿಶ್ವ ವಿಖ್ಯಾತ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಮುಲ್ಕ ಮೈದಾನ್ ತೋಫ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇದರ ಮದ್ಯೆ ಜಿಲ್ಲೆಯ ಆಲಮಟ್ಟಿಯಲ್ಲಿರುವ ರಾಕ್ ಗಾರ್ಡನ್, ಮೊಘಲ ಗಾರ್ಡನ್, ಇಟಾಲಿಯನ್ ಗಾರ್ಡನ್, ಸಂಗೀತ ನೃತ್ಯ ಕಾರಂಜಿ, ಲೇಷರ್ ಶೋ, ತ್ರೀಡಿ ಪ್ರದರ್ಶನ್ ಹೀಗೆ ಹಲವು ಆಕರ್ಷಣೀಯ ತಾಣಗಳಿವೆ. ಇಲ್ಲಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು, ಆದರೆ ಈಗ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಕಾರಣ ಪ್ರವಾಸಿಗರ ಸಂಖ್ಯೆ ಭಾರೀ ಇಳಿಕೆ ಕಂಡಿದೆ. ಇದರಿಂದ‌ ಪ್ರವಾಸಿಗರನ್ನೇ ನಂಬಿ‌ ಬದುಕು ಕಟ್ಟಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಪರದಾಡುತ್ತಿದ್ದಾರೆ…

ಇನ್ನೂ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವದು ಒಂದೆಡೆಯಾದರೆ, ಇನ್ನೊಂದೆಡೆ ಈಗ ಶಾಲಾ ಶೈಕ್ಷಣಿಕ ಪ್ರವಾಸಗಳು ಸಹಿತ ಮುಗಿದಿದ್ದು‌ ಹೀಗಾಗಿ ಪ್ರವಾಸೋದ್ಯಮಕ್ಕೆ ಇದು ಭಾರೀ ಪೆಟ್ಟು ಬಿದ್ದಿದೆ. ಇನ್ನೂ ಆಲಮಟ್ಟಿ ಯಲ್ಲಿರುವ ಕೆಲ ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆಯ ಕೊರತೆ ಇದೆ ಇನ್ನಷ್ಟು ಮೂಲಭೂತ ಸೌಕರ್ಯ ಕಲ್ಪಸಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ…

ಒಟ್ಟಿನಲ್ಲಿ ಹಲವು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ ವಿಜಯಪುರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಈಗ ಜನರಿಲ್ಲದೇ ಬಿಕೋ ಎನ್ನುತ್ತಿದೆ, ಇನ್ನೊಂದೆಡೆ ಬಿಸಿಲಿನ‌ ತಾಪ ಕೂಡಾ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ ಅಂತಾನೇ ಹೇಳಬಹುದು…

Tags:

error: Content is protected !!