ಕರ್ನಾಟಕವು ಹೊಸ ಉದ್ಯಮಗಳಿಗೆ ಪ್ರಶಸ್ಥ ಅನುಕೂಲಕರ ರಾಜ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹೇಳಿದರು.

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಶರಣಪ್ರಕಾಶ ಪಾಟೀಲ ಇನ್ನುಳಿದವರು ಉಪಸ್ಥಿತರಿದ್ಧು, ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕರ್ನಾಟಕವು ಉದ್ಯೋಗಗಳನ್ನು ಸೃಷ್ಠಿಸಲು ಅನುಕೂಲಕರ ವಾತಾವರಣವನ್ನು ಹೊಂದಿದ ರಾಜ್ಯವಾಗಿದೆ. ಪ್ರಕೃತಿ ಮಾತೆಯ ಆರ್ಶೀವಾದದೊಂದಿಗೆ ಸರಸ್ವತಿ ಮತ್ತು ಲಕ್ಷ್ಮೀದೇವಿಯ ವಾಸಸ್ಥಳವಾಗಿದೆ ಎಂದರೇ ತಪ್ಪಾಗಲಾರದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನವೋದ್ಯಮಿಗಳಿಗೆ ಪ್ರೋತ್ಸಾಹಿಸಿ ದೇಶವನ್ನು ಪ್ರಗತಿಪಥದತ್ತ ಒಯ್ಯುವ ಕೆಲಸವನ್ನು ಮಾಡುತ್ತಿವೆ. ಸರ್ಕಾರಗಳು ಬರಬಹುದು ಹೋಗಬಹುದು ಆದರೇ ದೇಶವು ಸಮೃದ್ಧಿಯುತವಾಗಿರಬೇಕೆಂಬ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ನೆನೆದರು.
ಬೃಹತ್ ಉದ್ಯೋಗ ಸಚಿವರಾದ ಎಂ.ಬಿ. ಪಾಟೀಲ್ ಅವರು ಐತಿಹಾಸಿಕ ನೆಲೆಯಿರುವ ಕರ್ನಾಟಕದಲ್ಲಿ ಮೊದಲಿನಿಂದಲೂ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣವಿದೆ. 130 ಕ್ಕೂ ಅಧಿಕ ಬೃಹತ್ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಉದ್ಯೋಗಗಳನ್ನು ಸ್ಥಾಪಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೂಡಿಕೆದಾರರಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸುತ್ತದೆ ಎಂದರು.
ಇನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಬಂಡವಾಳ ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಸೌಲಭ್ಯಗಳು ಮತ್ತು ವ್ಯಾಪಾರವಹಿವಾಟಿಗೆ ಇರುವ ಅನುಕೂಲ ಸ್ಥಿತಿಗಳನ್ನು ವಿವರಿಸಿದರು. ಕರ್ನಾಟಕದಲ್ಲಿ ಒಳ್ಳೆಯ ಯುವಶಕ್ತಿ, ಕೌಶಲ್ಯಯುತ ಮಾನವ ಸಂಪತ್ತು, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳಿರುವುದಾಗಿ ತಿಳಿಸಿದರು.
ಸಿಎಂ ಸಿದ್ಧರಾಮಯ್ಯ ಅವರು ಹೂಡಿಕೆದಾರರ ಸಹಭಾಗಿತ್ವವು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ರಾಜ್ಯವಾಗಿದ್ದು, ಮೈಸೂರು, ಬೆಂಗಳೂರು ಸೇರಿದಂತೆ ಹಲವಾರು ದೊಡ್ಡ ನಗರಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಲು ಅನುಕೂಲಕರ ವಾತಾವರಣವಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಹೂಡಿಕೆದಾರರು ಉಪಸ್ಥಿತರಿದ್ಧರು