ವಿಜಯಪುರದಲ್ಲಿ ಸರಿಯಾಗಿ ವಿದ್ಯುತ್ ಸಿಗದ ಹಿನ್ನೆಲೆಯಲ್ಲಿ ರೈತರು ವಿದ್ಯುತ್ ಪ್ರಸರಣ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದಾರೆ. ನಾಗಠಾಣ ವ್ಯಾಪ್ತಿಯಲ್ಲಿ ವಿದ್ಯುತ್ ಪುರೈಕೆಯಲ್ಲಿ ಭಾರೀ ವ್ಯತ್ಯಾಸವಾಗ್ತಿದ್ದು, ಕರೆಂಟ್ ಸಿಗದೆ ರೈತರು ಪರದಾಡುವಂತಾಗಿದೆ. ಇದರಿಂದ ರೊಚ್ಚಿಗೆದ್ದ ರೈತರು ನಾಗಠಾಣ ವಿದ್ಯುತ್ ಪ್ರಸರಣ ಕೇಂದ್ರ ಎದುರು ಧರಣೀ ಕೈಗೊಂಡಿದ್ದಾರೆ.

ಸ್ಥಳದಲ್ಲೆ ಅಡುಗೆ ತಯಾರಿಸಿ ಅಹೋರಾತ್ರಿ ಶುರು ಮಾಡಿದ್ದಾರೆ. ಕೆ.ಇ.ಬಿ ಕಚೇರಿಯಲ್ಲಿ ಸಿಬ್ಬಂದಿಗಳ ಸಮಸ್ಯೆ ಇದ್ದು, ಪರಿಣಾಮ ರೈತರು ಸರಿಯಾಗಿ ವಿದ್ಯುತ್ ಸಿಗದೆ ಪರದಾಡ್ತಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ..