Dharwad

ಧಾರವಾಡ ಪತ್ರಿಕಾ ಛಾಯಾಗ್ರಾಹಕ ಆರ್. ಕೆ. ಅವರ ನಿಧನಕ್ಕೆ ನುಡಿ ನಮನ…ಭಾವಚಿತ್ರಕ್ಕೆ ಪುಷ್ಪ. ನಮನ ಸಲ್ಲಿಸಿ ಶ್ರದ್ಧಾಂಜಲಿ..

Share

ಕಳೆದ ಬುಧುವಾರದಂದು ಧಾರವಾಡದ ಪತ್ರಿಕಾ ಛಾಯಾಗ್ರಾಹಕರಾಗಿದ್ದ ರಾಮಚಂದ್ರ ಕುಲಕರ್ಣಿ ಅವರು ನಿಧನರಾಗಿದ್ದು, ಈ ಹಿನ್ನಲೆಯಲ್ಲಿ ಅವರ ಸ್ಮರಣೆಗಾಗಿ ಧಾರವಾಡ ವಾರ್ತಾ ಇಲಾಖೆಯಲ್ಲಿ ಪತ್ರಕರ್ತರು ಹಾಗೂ ವಾರ್ತಾ ಇಲಸಖೆಯ ಅಧಿಕಾರಿಗಳು ನುಡಿ ನಮನ ಸಲ್ಲಿಸಿ ಮೌನಾಚಾರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ವಾರ್ತಾಭವನದಲ್ಲಿ ಪತ್ರಕರ್ತರಿಂದ ನುಡಿ ನಮನ ಕಾರ್ಯಕ್ರಮ ಜರುಗಿತು. ರಾಮಚಂದ್ರ ಕುಲಕರ್ಣಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಮಿತ್ರರೆಲ್ಲರು ನುಡಿನಮನ ಕಾರ್ಯಕ್ರಮದಲ್ಲಿ‌ ಭಾಗಿಯಾದರು.‌ ಈ ವೇಳೆ ಅನೇಕ‌ಹಿರಿಯ ಪತ್ರಕರ್ತರು‌ ಮಾತನಾಡಿ, ಆರ್ ಕೆ ಖ್ಯಾತಿ ರಾಮಚಂದ್ರ ಕುಲಕರ್ಣಿರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಅವರ ಆತ್ಮಕ್ಕೆ ಶಾಂತಿ ಕೋರಿದರು. ಇನ್ನೂ ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಹಾಯಕ ವಾರ್ತಾಧಿಕಾರಿ ಡಾ. ಎಸ್.ಎಮ್. ಹಿರೇಮಠ ಸೇರಿದಂತೆ ಸಿಬ್ಬಂದಿಗಳು‌ ಉಪಸ್ಥಿತರಿದ್ದರು. ‌

Tags:

error: Content is protected !!