Dharwad

ಧಾರವಾಡದಲ್ಲಿ ಮಹಿಳೆಯರ ಒಳ ಉಡುಪು ಕದ್ದು ವಿಕೃತ ಮನಸ್ಥಿತಿ ಮೇರೆದ ಯುವಕ…. ಸಿಸಿಟಿವಿ ವಿಡಿಯೋ ವೈರಲ್….

Share

ಮನೆಗಳತ ಮತ್ತೊಂದು ಮಗದೊಂದು ಸಾಮಗ್ರಿ ಸೇರಿದಂತೆ ಬೆಲೆ ಬಾಳುವ ಸಾಮಗ್ರಿಗಳನ್ನು ಕಳ್ಳತನ ಮಾಡುವ ಎಷ್ಟೋ ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆದರೆ ಧಾರವಾಡದಲ್ಲೊಬ್ಬ ಮಹಿಳೆಯರ ಉಡುಪುಗಳನ್ನು ಕಳತನ ಮಾಡುವ ಮೂಲಕ ವ್ಯಕ್ತಿಯೊಬ್ಬ ವಿಕೃತಿ ಮನಸ್ಥಿತಿ ತೋರಿದ್ದು, ಸಿಸಿಟಿವಿ ವಿಡಿಯೋ ವೈರಲಾಗಿದೆ.‌

ಹೌದು ಧಾರವಾಡ ನಗರದ ಮಿಚಿಗಿನ ಕಂಪೌಂಡ್ ವ್ಯಾಪ್ತಿಯ ಮನೆಯೊಂದರ ಒಳಾಂಯಣದಲ್ಲಿ ತೊಳೆದು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ವ್ಯಕ್ತಿ ಕದ್ದುಕೊಂಡು ಹೋಗಿದ್ದಾನೆ. ಇನ್ನೂ ವ್ಯಕ್ತಿಯ ಈ ನೀಚ ಕೃತ್ಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.‌ ಸಿಸಿಟಿವಿ ವಿಡಿಯೋ ವೈರಲಾದ ಹಿನ್ನಲೆಯಲ್ಲಿ ಮಿಚಿಗಿನ್ ಕಂಪೌಂಡ್ ನಿವಾಸಿಗಳು ಬೆಚ್ಚಿಬಿದಿದ್ದಾರೆ. ರಾತ್ರಿ ವೇಳೆ ಈ ವ್ಯಕ್ತಿಯು ಮನೆಯ ಆವರಣಕ್ಕೆ ಬರುವುದ್ಲದೇ, ನೀಚ ಕೃತ್ಯದಿಂದಾಗಿ ಮನೆಯಿಂದ ಮಹಿಳೆಯರು ಹೊರಬರಲು ಕೂಡಾ ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಇಂತಹನನ್ನು ಬಂಧನ ಮಾಡಿ ಕಠಿಣ ಕ್ರಮಕ್ಕೆ ಸ್ಥಳೀಯರು‌ ಒತ್ತಾಯಿಸಿದದಾರೆ. ಧಾರವಾಡ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Tags:

error: Content is protected !!