ಅಪಾಯ ಅಂಚಿನಲ್ಲಿರುವ ಟ್ರಾನ್ಸಫಾರ್ಮರನ್ನು ಅಭಿವೃದ್ಧಿಗೊಳಿಸಿ…
ಬೆಳಗಾವಿಯ ಪೈಪಲೈನ್ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್
ಸ್ವಚ್ಛತೆಯನ್ನು ಕೈಗೊಂಡು ಅಡಿಪಾಯವನ್ನು ಗಟ್ಟಿಗೊಳಿಸಿ
ಪೈಪಲೈನ್ ರಸ್ತೆಯ ನಾಗರೀಕರಿಂದ ಆಗ್ರಹ

ಬೆಳಗಾವಿಯ ಹಿಂಡಲಗಾ ಪೈಪಲೈನ್ ರಸ್ತೆಯಲ್ಲಿ ಅಪಾಯ ಅಂಚಿನಲ್ಲಿರುವ ಟ್ರಾನ್ಸಫಾರ್ಮರನ್ನು ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರಿಂದ ಆಗ್ರಹಿಸಲಾಗುತ್ತಿದೆ.
ಬೆಳಗಾವಿಯ ಹಿಂಡಲಗಾ ಪೈಪಲೈನ್ ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ. ರಸ್ತೆ ನಿರ್ಮಾಣ ಕಾರ್ಯವನ್ನು ಅಭಿಯಂತರರಾದ ಭಜಂತ್ರಿ ಅವರ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಲಾಗಿದೆ. ಆದರೇ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ ಅಪಾಯದ ಅಂಚಿನಲ್ಲಿದೆ. ಈ ಹಿನ್ನೆಲೆ ಅದಕ್ಕೆ ಸುತ್ತಿಕೊಂಡಿರುವ ಬಳ್ಳಿಯನ್ನು ತೆಗೆದು ಹಾಕಿ, ಸ್ವಚ್ಛತೆಯನ್ನು ಮಾಡಬೇಕು. ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ಅದರ ಅಡಿಪಾಯವನ್ನು ಗಟ್ಟಿಗೊಳಿಸಬೇಕೆಂದು ರಾಜಕುಮಾರ್ ಖಟಾವಕರ ಆಗ್ರಹಿಸಿದ್ದಾರೆ.