ರಾಜ್ಯ ಸರ್ಕಾರದ ಬಜೆಟನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದಂತೆ ಬೆಳಗಾವಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಅನುದಾನದ ಪ್ರಸ್ತಾಪವನ್ನಟ್ಟಿರುವುದಾಗಿ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ತಿಳಿಸಿದರು.

ಸಿಎಂ ಬಜೆಟ್ ಪೂರ್ವ ಸಭೆಯನ್ನು ಕರೆಯುತ್ತಿದ್ದು, ಲೋಕೋಪಯೋಗಿ ಇಲಾಖೆಗಾಗಿ ಅನುದಾನದ ಪ್ರಸ್ತಾವನೆಯನ್ನು ಇರಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ನಮ್ಮ ಇಲಾಖೆಗೂ ಕೂಡ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ. ಬೆಳಗಾವಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಅನುದಾನವನ್ನು ಕೇಳಲಾಗಿದೆ. ರಾಜ್ಯದಲ್ಲಿನ ರಸ್ತೆಗಳನ್ನು ವಿವಿಧ ಯೋಜನೆಯಡಿ ನಿರ್ಮಿಸಲಾಗುತ್ತಿದೆ ಎಂದರು.
ಇನ್ನು ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬರುತ್ತಿಲ್ಲವೆಂಬುದರ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳಲಾಗಿದೆ. ಸರ್ಕಾರದಲ್ಲಿ ಕೆಲಸ ಮಾಡಿದ ಸಮಾಧಾನವಿದೆ. ಗುತ್ತಿಗೆದಾರರಿಗೆ ಅವಕಾಶವನ್ನು ನೀಡಿದ್ದು, ಮುಂದೆಯೂ ಸಹಾಯ ಮಾಡಲಾಗುವುದು ಎಂದರು.
ನಿಗಮ ಮಂಡಳಿಗಳ ನಾಮನಿರ್ದೇಶಿತ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಗೃಹ ಸಚಿವರ ನೇತೃತ್ವದಲ್ಲಿನ ಕಮೀಟಿಯಿಂದ ಶಿಫಾರಸ್ಸು ಮಾಡಿ ಸಿಎಂ ಅವರಿಗೆ ಕಳುಹಿಸಲಾಗಿದೆ. ಇದಕ್ಕೆ 2ವರೆ ವರ್ಷ ವಿಳಂಬವಾಗಿರುವುದರ ಬಗ್ಗೆ ಮಾಹಿತಿಯಿಲ್ಲ ಎಂದರು. ಎಲ್ಲವೂ ಬೆಂಗಳೂರಿಗೆ ಸೀಮಿತವಾಗದೇ, ವಿಭಾಗುವಾರು ಹಂಚಿಕೆ ಮಾಡಬೇಕೆಂದು ಸಲಹೆ ನೀಡಲಾಗಿದೆ ಎಂದರು.
ಇನ್ನು ತಾವು ದೆಹಲಿಗೆ ಹೋಗಲ್ಲ. ಇಲ್ಲಿಯೇ ಹಲವಾರು ಕೆಲಸ ಕಾರ್ಯಗಳಿವೆ. ಯಾರ ಬಳಿಯೂ ಭೇಟಿಗಾಗಿ ಅವಕಾಶ ಕೇಳಿಲ್ಲ. ಕರ್ನಾಟಕ ಭವನದ ಉದ್ಘಾಟನೆಯನ್ನು ಸಿಎಂ ದಿನಾಂಕ ನಿಗದಿ ಮಾಡುತ್ತಿದ್ದಂತೆ ಮಾಡಲಾಗುವುದು ಎಂದರು.