ಚಿಕ್ಕೋಡಿ: ಹಿರೇಕೊಡಿ ಗ್ರಾಮ ಪಂಚಾಯತನಲ್ಲಿ ಯಾವುದೇ ರೀತಿಯಾದ ಭ್ರಷ್ಟಾಚಾರ ನಡೆದಿಲ್ಲ,ದಲಿತ ಮಹಿಳೆ ಅಧ್ಯಕ್ಷ್ಯೆ ಆಗಿರುವುದಕ್ಕೆ ಕೆಲ ಸದಸ್ಯರು ಸಹಿಸಿಕೊಳ್ಳಲಾರದೆ ಈ ರೀತಿಯಾದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ್ಯೆ ನಿಲಮ ಸತೀಶ ದಾಮ್ಮನವರ ಹೇಳಿದ್ದಾರೆ.

ಹಿರೇಕೊಡಿ ಗ್ರಾಮದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಆರೋಪಕ್ಕೆ ಸಂಬಂಧಿಸಿದಂತೆ ಸಭೆಯನ್ನು ಆಯೋಜನೆ ಮಾಡಲಾಗಿತ್ತು.ಆದ್ರೆ ಅವರೆ ಈ ಸಭೆಯನ್ನು ರದ್ದು ಮಾಡಿದ್ದಾರೆ. ಗ್ರಾ.ಪಂನ ಹೊಸ ಕಟ್ಟಡ ಆಗುತ್ತಿದೆ.ಆ ಕಟ್ಟಡ ಕಾಮಗಾರಿಯನ್ನು ಅವರೇ ಸ್ಥಗೀತಗೊಳಿಸಿದ್ದಾರೆ.ನಾನು ದಲಿತ ಅಧ್ಯಕ್ಷ್ಯೆಯಾಗಿದೇನೆ.ನನ್ನಗೆ ಶ್ರೇಯಸ್ಸು ಬರಬಾರದೆಂದು ಈ ರೀತಿಯಾದ ಆರೋಪವನ್ನು ಮಾಡುತ್ತಿದ್ದಾರೆ ಎಂದರು.ಹಾಗೂ ವಾರ್ಡ ನಂಬರ 7 ಹಾಗೂ 8ರ ಸದಸ್ಯರು ನನಗೆ ರಾಜೀನಾಮೆ ಕೋಡಲೆಬೇಕು ಇಲ್ಲವಾದರೆ ನಿಮ್ಮನಾ ಜೈಲಿಗೆ ಹಾಕುತ್ತೇವೆ,ಕೊರ್ಟಿಗೆ ಕಳುಹಿಸುತ್ತೇವೆ ಎಂದು ದಬ್ಬಾಳಿಕೆಯನ್ನು ಹಾಕಿದ್ದಾರೆ ಎಂದರು.
ಬಳಿಕ ಗ್ರಾ.ಪಂ ಉಪಾಧ್ಯಕ್ಷರಾದ ರಾಮದಾಸ ಬಂಡಗರ ಮಾತನಾಡಿ ಭ್ರಷ್ಟಾಚಾರ ಆರೋಪದಲ್ಲಿ ಯಾವುದೇ ಹುರಳಿಲ್ಲ.ಅಧ್ಯಕ್ಷ,ಉಪಾಧ್ಯಕ್ಷರು ರಾಜೀನಾಮೆ ನೀಡಲ್ಲಿ ಎಂದು ಈ ರೀತಿಯಾದ ಆರೋಪವನ್ನು ಮಾಡುತ್ತಿದ್ದಾರೆ.ತನಿಖೆಯನ್ನು ಮಾಡಲಿ ನಾವು ಬಧ್ದರಿದೇವೆ.ಗ್ರಾಮದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಕೊಳ್ಳಲಾಗದೆ,ಗ್ರಾಮದ ಹೆಸರನ್ನು ಕೆಡಿಸಲು ಹೋರಟ್ಟಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಭರತ ದೇವಡಕರ,ಅನೀತಾ ದೇವಡಕರ,ಮಹಾದೇವಿ ನಿಂಗಾಗೋಳ,ಗಂಗೂಬಾಯಿ ಕಾಂಬಳೆ,ಬಾಬರ ಪಟೇಲ್,ಅತಿಕಾ ಅನಾಸಾರ ಮುಜಾವರ, ವಿದ್ಯಾಶ್ರೀ ಸಾಗರ ಬೋಸಲೆ,ಜ್ಯೋತಿ ಗಣಪತಿ ಮಾಳಿ,ಶ್ರೀದೇವಿ ಪರಗೌಡ ಗೀತಾಜೆ,ಮಹದೇವ ಪವಾಡೆ,ಮಲ್ಲಿಕಾರ್ಜುನ ಚೌಗಲಾ,ಸುರೇಶ ಚೌಗಲಾ,ಲಕ್ಷ್ಮಣ ನಿಂಗಾಗೋಳ,ಖುಶ್ರು ಪಟೇಲ್,ಶ್ರೀಕಾಂತ ಅಕ್ಕೆಣನವರ,ಪರಶುರಾಮ ಸಾವಂತ,ಸಂಜು ಬನಹಟ್ಟಿ,ಅಜ್ರುದಿನ ಪಟೇಲ್, ಗಣಪತಿ ಮಾಳಿ,ಶಶಿಕಾಂತ ಗೋಳಶಿಂಗೆ,ಅಬ್ದುಲ್ ಖದಾರ ಪಟೇಲ್, ಮೊಹಮದಾ ಶರೀಪ್ ಪಟೇಲ್, ರಾವಸಾಹೇಬ ಅಕೇನ್ನವರ,ರಿಯಾಜ್ ನಾಲ್ಬಂದ,ಲಗಮ್ಮನ್ನ ಬಾಳನಾಯಿಕ,ಭೀಮ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..