ಹುಕ್ಕೇರಿ : ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಸರ್ವಾದ್ಯಕ್ಷರಾಗಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಆಯ್ಕೆ ಯಾಗಿದ್ದಾರೆ ಎಂದು ತಾಲೂಕಾ ಕ ಸಾ ಪ ಅದ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು. ಅವರು ಇಂದು ಹುಕ್ಕೇರಿ ನಗರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ಪಾದಾಧಿಕಾರಿಗಳ ಮತ್ತು ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಹುಕ್ಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ 12 ನೇ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಯಮಕನಮರ್ಡಿ ನಗರದ ಹುನಶಿಕೊಳ್ಳ ಮಠದ ಆವರಣದಲ್ಲಿ ಜರುಗಿಸಲು ತಿರ್ಮಾನಿಸಲಾಗಿದೆ ಹಾಗೂ ಸರ್ವಸದಸ್ಯರು ಸಭೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮಿಗಳನ್ನು ಸಮ್ಮೇಳನದ ಸರ್ವಾದ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಇದರಿಂದ ನಮಗೆ ಸಂತೋಷವಾಗಿದೆ ಎಂದರು
ಪೂರ್ವ ಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧೀಕಾರಿ ಪ್ರಭಾವತಿ ಪಾಟೀಲ, ಅಕ್ಷರ ದಾಸೋಹ ನಿರ್ದೆಶಕಿ ಸವಿತಾ ಹಲಕಿ, ಕ್ಷೇತ್ರ ಸಮನ್ವಯ ಅಧಿಕಾರಿ ಎ ಎಸ್ ಪದ್ಮಣ್ಣವರ, ಸಾಹಿತಿಗಳಾದ ಡಾ, ರಾಜಶೇಖರ ಇಚ್ಚಂಗಿ, ಬಿ ಬಿ ನಾಯಿಕ, ನಂಜುಡಪ್ಪಾ ಉಪಸ್ಥಿತರಿದ್ದರು. ಕ ಸಾ ಪ ಕಾರ್ಯದರ್ಶಿ ಸಿ ಎಂ ದರಬಾರೆ ಮಾತನಾಡಿ ಗಡಿ ಭಾಗದ ಯಮಕನಮರ್ಡಿ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿದ್ದು ಮತ್ತು ಕನ್ನಡದ ಸ್ವಾಮಿಗಳನ್ನು ಸರ್ವಾದ್ಯಕ್ಷರಾಗಿ ಆಯ್ಕೆ ಮಾಡಿದ್ದು ನಮಗೆಲ್ಲಾ ಖುಷಿ ತಂದಿದೆ ಎಲ್ಲ ಕನ್ನಡ ಮನಸ್ಸುಗಳು ಸಮ್ಮೇಳನ ವನ್ನು ಯಶಸ್ವಿಗೋಳಿಸೋಣ ಎಂದರು
ಈ ಸಂದರ್ಭದಲ್ಲಿ ಪ್ರಕಾಶ ಹೋಸಮನಿ, ಸಿ ವಿ ತುಪ್ಪದ, ಎಸ್ ಆರ್ ಗಸ್ತಿ, ಮಂಜುಳಾ ಅಡಿಕೆ, ಜಗದೀಶ ಮೀರಗಿ,ಬಾಹುಬಲಿ ಹಂದೂರ, ಕರವೇ ಅದ್ಯಕ್ಷ ಪ್ರಮೋದ ಕೂಗೆ, ಪಿ ವಿ ರಿಜಕನ್ನವರ, ವಿಜಯ ಶಿರಗಾಂವಿ, ಸಿ ಆರ್ ಪಿ , ಬಿಆರ್ ಪಿ,ಪಿ ಲೀಲಾ ರಜಪೂತ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.