ರಾಯಬಾಗ ಶಾಖೆಯ ಸಂತ ನಿರಂಕಾರ ಮಂಡಳಿಯ ಕಾರ್ಯಕರ್ತರು ಕರ್ನಾಟಕದ ಎರಡನೇಯ ಅತಿದೊಡ್ಡ ಜಾತ್ರೆಯಾದ ಶ್ರೀ ಮಾಯಕ್ಕಾ ದೇವಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಸಂತ ಉಚಿತ ಶುದ್ಧ ಕುಡಿಯುವ ನೀರು ನೀರು ಒದಗಿಸುವ ಮೂಲಕ ಭಕ್ತಾದಿಗಳಿಗೆ ಭಗಿರತರಾಗಿದ್ದಾರೆ

ಬೇಸಿಗೆಯ ಬೇಗೆಯಲ್ಲಿ ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷಾಂತರ ಭಕ್ತರಿಗೆ ಕುಡಿಯುವ ನೀರು ಪೂರೈಸಿ ಅವರ ದಾಹ ನಿಗಿಸುವ ಕೆಲಸದಲ್ಲಿ ತೊಡಗಿ ಭಕ್ತರ ಪ್ರಶಂಸೆಗೆ ಪಾತ್ರರಾದರು.
ನೀರಿನ ಜೊತೆಗೆ ಒಣ ದ್ರಾಕ್ಷಿ ಬೆಲ್ಲ ಕೊಡುತ್ತಿದ್ದು ಬೆಳಿಗ್ಗೇ 7:00 ಗಂಟೆಯಿಂದ ರಾತ್ರಿಯವರೆಗೆ ಸಂತ ನಿರಂಕಾರಿ ಸೇವಾದಳಗಳು ಸೇವೆ ಮಾಡುತ್ತಾ ಇದ್ದಾರೆ ಅದರ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಮತ್ತು 05 ವೈದ್ಯರು ಸತತ ಸೇವೆಯಲ್ಲಿ ನಿರತರಾಗಿದ್ದಾರೆ.
ಇದೇ ತರಹ ಬರುವಂತಹ ಭಕ್ತಾಧಿಗಳಿಗೆ ಸ್ವಾಗತವು, ಉಚಿತ ಆರೋಗ್ಯ ತಪಾಸಣೆ ಮಾಡುತ್ತಾ ಇದ್ದಾರೆ.
ಅದೆ ರೀತಿ ಸದ್ಗುರು ಸುದಿಕ್ಷಾ ಮಾತಾಜಿ ಅವರು ಮಾನವರು ಮಾನವರ ಕೆಲಸಕ್ಕೆ ಬಾರದೇ ಇದ್ದರೇ ಮನುಷ್ಯನ ಜನ್ಮ ವ್ಯರ್ಥ ಈ ಒಂದು ಸ್ಥಿತಿ ಮುಂದುಗಡೆ ಇಟ್ಟು ಕೊಂಡು ಬರುವ ಅನೇಕ ಸಾಮಾಜಿಕ ಕಾರ್ಯಗಳು ಮುಂದೆ ಬರುವ ಇದೇ 23 ರಂದು ಗುರು ಪೂಜಾ ದಿನ ಇದ್ದು ಅದರ ನಿಮಿತ್ಯ ಇಡೀ ಭಾರತದಲ್ಲಿ ಸ್ವಚತೆ ಕಾರ್ಯಕ್ರಮ ಸಸಿ ನೆಡುವುದು ಇರುತ್ತದೆ.
ಸಂತ ನಿರಂಕಾರಿ ಮಂಡಳ ವತಿಯಿಂದ ಶಾಲೆಗಳಲ್ಲಿ ನಮ್ಮ ಮಹಾತ್ಮಾರು ಹಾಗೂ ಮಾತಾಜಿಯವರು ಚಿಕ್ಕ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಜೊತೆಗೆ ಈಗಿನ ಕಾಲದಲ್ಲಿ ಹೇಗೆ ಇರಬೇಕೆಂದು ತಿಳಿಸಿಕೊಡುತ್ತಾರೆ.
ತಂದೆ, ತಾಯಿ ಬಂಧು ಬಳಗ ನಮ್ಮವರು ಅಂತಹ ಪೂರ್ಣ ಮಾನವ ಪರಿವಾರ ಪ್ರೇಮದಿಂದ ಇರುವಂತಹ ಮನೋಭಾವ ಮೂಡಿಸುತ್ತಾರೆ ಇದೇ ನಮ್ಮ ಮುಖ್ಯ ಉದ್ದೇಶ ಇದೆ ಇದಕ್ಕೆ ನಾವು ನರ ಸೇವೆಯೇ ನಾರಾಯಣ ಸೇವೆ ಅಂತಾ ಅನ್ನುತ್ತೇವೆ ಅಂದರು.
ಈ ಕಾರ್ಯಕ್ರಮದಲ್ಲಿ ಸುನೀಲ ರಾತ್ರಾಜೀ ಚಿಂಚಲಿ ಸರಕಾರ ಜಿತ್ರೇಂದ್ರ ಜಾಧವ, ಗಣಪತಿ ಗಾಡಿವಡ್ಡರ ವಿಜಯ ಮಾನೆ ಮಾರುತಿ ಮೋರೆ, ಮಹಾದೇವ ಹೊನಕುಪ್ಪೆ, ಗೋಪಿ ಜಿ ಸೇವಾದಳ ಸಂಚಾಲಕ, ಯೋಗೇಶ ಜೀ ಮತ್ತು ಹಲವು ಸಂತ ಮಹಾತ್ಮರು ಉಪಸ್ಥಿತರಿದ್ದರು.