ವಿಪಕ್ಷ ನಾಯಕ ಆರ್. ಅಶೋಕ ಅವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ತೆಗೆದು ಹಾಕಲಿ. ಕಿತ್ತು ಹೋಗುತ್ತಿರುವ ತಮ್ಮ ಟೆಂಟ್ ರಕ್ಷಿಸಿ ತಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಲಿ ಎಂದು ಮಾಜಿ ಡಿಸಿಎಂ ಮತ್ತು ಹಾಲಿ ಶಾಸಕ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ ತಿಂಗಳಲ್ಲಿ ಸಿಎಂ ಕುರ್ಚಿಗಾಗಿ ಮ್ಯೂಜಿಕಲ್ ಚೇರ್ ಆರಂಭಗೊಳ್ಳುತ್ತದೆ. ಡಿ.ಕೆ. ಶಿವಕುಮಾರ ಸಿಎಂ ಕುರ್ಚಿಯನ್ನು ಒದ್ದು ಕಿತ್ತುಕೊಳ್ಳುತ್ತಾರೆಂಬ ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆ ತಿರುಗೇಟು ನೀಡಿದ ಅವರು ಪ್ರತಿನಿತ್ಯ ಸುದ್ಧಿಯಲ್ಲಿರಬೇಕೆಂದು ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ತಮ್ಮ ತಟ್ಟೆಯಲ್ಲಿ ಹೆಬ್ಬಣ ಬಿದ್ದಿದೆ. ವಿರೋಧ ಪಕ್ಷದ ನಾಯಕರಾಗಿ ಮೊದಲು ತಮ್ಮ ಪಕ್ಷ ಸರಿ ಮಾಡಲೂ ಗಮನಕೊಡಲಿ. ಅವರ ಪಕ್ಷದ ಟೆಂಟ್ ಕಿತ್ತುಕೊಂಡು ಹೋಗುತ್ತಿದೆ. ಮೊದಲು ಅದನ್ನ ಗಮನಿಸಿ ಎಂದರು.
ಬಿಜೆಪಿಗರಿಗೆ ಬೇರೆ ಕೆಲಸವಿಲ್ಲದ ಕಾರಣ ಬೇರೆ ಪಕ್ಷದ ಕುರಿತು ಸದಾ ಮಾತನಾಡುತ್ತಾರೆ. ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆಯಲು ನಾವೇಕೆ ಹೋಗಬೇಕು? ಅದನ್ನ ಅವರ ತೆಗೆದುಕೊಳ್ಳಬೇಕು. ಕಾಂಗ್ರೆಸನಲ್ಲಿ ಯಾವುದು ಬಣವಿಲ್ಲ. 2028ರ ಚುನಾವಣೆಯಲ್ಲಿಯೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರಲಿದೆ ಎಂದರು. ಇನ್ನು ಪಕ್ಷಕ್ಕೆ ಸೇರುವ ಮುನ್ನ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಯಾಗಿತ್ತೆ ಎಂದು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು ಗಂಡ-ಹೆಂಡತಿಯರ ಮಧ್ಯೆ ರಾತ್ರಿ ನಡೆದ ಚರ್ಚೆಯನ್ನು ಸಾರ್ವಜನಿಕವಾಗಿ ತಿಳಿಸಲು ಸಾಧ್ಯವೇ ಎಂದರು.
ಇನ್ನು ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಕುರಿತು ಚರ್ಚೆ ಮಾಡುವುದು ನಮಗೆ ಅವಶ್ಯವಿಲ್ಲ. ಎಐಸಿಸಿ ಅಧ್ಯಕ್ಷರು ಬಾಯಿ ಮುಚ್ಚಿಕೊಂಡು ಇರಬೇಕೆಂದು ಕಟ್ಟುನಿಟ್ಟಿನ ಹೇಳಿಕೆ ನೀಡಿರುವುದಾಗಿ ತಿಳಿಸಿದರು.