ಚಾಲಕನ ನಿಯಂತ್ರಣ ತಪ್ಪಿ ಬೈಕವೊಂದು ರಸ್ತೆ ಡಿವೈಡರ್‌ಗೆ ಗುದ್ದಿದ ಪರಿಣಾಮ ಬೈಕ ಸವಾರನಿಗೆ ಗಂಭೀರ ಗಾಯವಾಗಿರೋ ಘಟನೆ, ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ಧಾರವಾಡದ ನವಲೂರು ಬಳಿ ದುರ್ಘಟನೆ ಸಂಭವಿಸಿದೆ.

ಧಾರವಾಡದಿಂದ ಹುಬ್ಬಳ್ಳಿ ಕಡೆ ತೆರಳುವ ವೇಳೆ ಈ ದುರ್ಘಟನೆ ನವಲೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸಂಭವಿಸಿದ್ದು, ಗಾಯಾಳು ಬೈಕ ಸವರಾರನನ್ನು ಸ್ಥಳೀಯ ವಾಹಮ ಸವಾರರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗಷ್ಟೇ ಘಟನೆ ನಡೆದಿದ್ದು, ಗಾಯಾಳು ಬೈಕ ಸವಾರನ ಹೆಸರು ಇನ್ನೂ ತಿಳಿದು ಬರಬೇಕಾಗಿದೆ. ಇನ್ನೂ ಅಪಘಾತವಾಗುತ್ತಿದಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಸೇರಿದಂತೆ ಸ್ಥಳೀಯ ನಿವಾಸಿಗಳು 112ಗೆ ಕರೆ ಮಾಡಿಮಾಹಿತಿ ನೀಡುವುದರೊಂದಿಗೆ ಅಂಬ್ಯುಲೇನ್ಸ್‌ಸಹಾಯದೊಂದಿಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರ ಮಾಹಿತಿಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.