ವಿದ್ಯಾರ್ಥಿಗಳು ವಿವಿಧ ಆಟ ಹಾಗೂ ವಿಜ್ಞಾನ ಪ್ರದರ್ಶನದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕೂಡಾ ಆಚರಿಸಲಾಯಿತು.

ಬೆಳಗಾವಿ ಜಿಲ್ಲಾ ಮಾಹೇಶ್ವರಿ ಅಂಧರ ಸೇವಾ ಸಂಸ್ಥೆಯ ಮಕ್ಕಳ ಶಾಲೆ ಹಾಗೂ ವಿಷನ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.ರಾಷ್ಟ್ರೀಯ ವಿಜ್ಞಾನ ಮಹತ್ವ ಹಾಗೂ ವಿಷನ್ ಎಂಪವರ್ ಕಾರ್ಯವೈಖರಿ ಬಗ್ಗೆ ರಾಜೇಶ್ವರಿ ಪಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷರಾದ ವಾದಿರಾಜ ಕಲಘಟಗಿ ಮುಖ್ಯ ಅತಿಥಿಗಳಾದ ರವಿ ಭಜಂತ್ರಿ,ಸಂಸ್ಥೆಯ ಕಾರ್ಯದರ್ಶಿಗಳಾದ ಚಿಂತಾಮಣಿ, ರಿಜ್ವಾನ ನಾವಗೇಕರ, ಶ್ರೇಯಾ ಬಿ.ಎನ್, ಆನಂದ ಜೋಶಿ, ಅಪ್ಪಣ್ಣಾ ಯಳ್ಳೂರಕರ, ಶ್ರೀನಿವಾಸ ಶಿವಣಗಿ,ರಾಜಶೇಖರ ಹಿರೇಮಠ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.