ಕಾಗವಾಡ : ಲಕ್ಷಾಂತರ ರೈತರು ಕನಸು ವಾಗಿರುವ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯ ಎರಡು ಪಂಪ್ಸೆಟ್ಟುಗಳು ಪ್ರಾರಂಭಿಸಿ ನೀರು ಹರಿಸಲಾಗಿದೆ. ಈ ಯೋಜನೆ ಪೂರ್ಣಗೊಳಿಸಲು ಇನ್ನೂ ಮೂರು ನೂರು ಕೋಟಿ ಅವಶ್ಯಕತೆ ಇದೆ. ಇದನ್ನು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಹಣ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.

ಶನಿವಾರ ದಂದು ಶೇಡಬಾಳದಲ್ಲಿ ಮಾತನಾಡುವಾಗ, ಬಸವೇಶ್ವರ ಏತ ನೀರಾವರಿ ಯೋಜನೆ ಬಹಳ ದಿನಗಳಿಂದ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದೇವೆ. ನೀರು ಹರಿದುಹೋಗಿದ್ದು ಮೂರು ಕೆರೆಗಳು ತುಂಬಿವೆ ಈ ಕೆರೆಗಳ ಪೂಜೆ ನಾನು ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮಾಡಿದ್ದೇವೆ. ಯೋಜನೆ ಪೂರ್ಣಗೊಳಿಸಲು ೩೦೦ ಕೋಟಿ ರೂಪಾಯಿ ಅವಶಕ್ತಿ ಇದೆ ಇದನ್ನು ಗಮನದಲ್ಲಿ ತಂದಾಗ ಒಪ್ಪಿಕೊಂಡಿದ್ದಾರೆ. ಬರುವ ಮಳೆಗಾಲದಲ್ಲಿ ಯೋಜನೆ ಸಂಪೂರ್ಣ ಸಾಮರ್ಥ್ಯದಿಂದ ಚಾಲನೆಯಲ್ಲಿ ಇರಲಿದೆ ಎಂದು ಹೇಳಿದರು.
ಮಹಾಕುಂಭಕ್ಕೆ ನೀವು ಹಾಗೂ ಇನ್ನುಳಿದ ಶಾಸಕರು ಹೋಗಿದ್ದಿರಿ ಎನ್ನು ಎಂದು ಕೇಳಿದಾಗ. ನಾನು ಮಹಾಕುಂಭಕ್ಕೆ ಹೋಗೆಯಿಲ್ಲ, ಬೇರೆ ಯಾರೇ ಹೋಗಿರಬಹುದು ಆದರೆ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ಕಂಡಿದ್ದೇನೆ ಅದು ತಪ್ಪು. ನಾನ್ನು ಮಹಾಕುಂಭಕ್ಕೆ ಹೋಗಲ್ಲ ಎಂದು ಸ್ಪಷ್ಟ ಹೇಳಿದರು.
ವಿದ್ಯುತ್ ಸಂಪರ್ಕದ ಆಗುತ್ತಿರುವ ವ್ಯಾತ್ತೆಯ ಬಗ್ಗೆ ವಿಚಾರಿಸಿದಾಗ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಚಾರ ಕಣು ಮುಚಾಲೆ ವಾಗುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರತಿದಿನ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಿರಿ ಎಂದು ಹೇಳಿದ್ದೇನೆ. ಆದರೂ ಬೇರೆ ಕಡೆ ಇದನ್ನು ಪಾಲನೆ ಆಗುತ್ತಿಲ್ಲ ಅದರ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಎಲ್ಲ ವರದಿಗಾರರ ಸಮಕ್ಷ ಮಾಹಿತಿ ನೀಡಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲೇಬೇಕೆಂದು ಶಾಸಕರಾಗಿ ಒತ್ತಾಯಿಸಿದರು. ಇಲಿಯ ರೈತರು ಸಾರ್ವಜನಿಕರು ಶಾಸಕರ ತತ್ಪರ ಸೇವೆ ಬಗ್ಗೆ ಸ್ಲಾö್ಯಗನೆ ವ್ಯಕ್ತಪಡಿಸಿದರು.
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ