ಒಂದೇ ಆಸ್ತಿ ಹಕ್ಕುಪತ್ರವನ್ನು ಇಬ್ಬರಿಗೆ ನೀಡಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಎಡವಟ್ಟು ಮಾಡಿಕೊಂಡಿದೆ. ಗೊಂದಲವನ್ನು ಸರಿಪಡಿಸಿ ಇ ಖಾತೆ ಪಹಣಿ ಕೊಡಬೇಕೆಂದು ದಿವ್ಯಾಂಗ ವ್ಯಕ್ತಿ ಆಗ್ರಹಿಸುತ್ತಿದ್ದಾರೆ. ಮಗನ ಮದುವೆಗೆ ಸಾಲ ಸಿಗದೇ, ದಿವ್ಯಾಂಗ ವ್ಯಕ್ತಿ ಕಾರ್ಯಾಲಯದಲ್ಲೇ ಪ್ರತಿಭಟನೆ ಆರಂಭಿಸಿದ್ದಾನೆ.
ಕಳೆದ ನಾಲ್ಕು ತಿಂಗಳಿಂದ ಬಿಟಿಡಿಎ ಕಚೇರಿಗೆ ಘೂಳಪ್ಪ ಏಳೆಮ್ಮಿ ಎಂಬ ದಿವ್ಯಾಂಗ ವ್ಯಕ್ತಿ ಅಲೆದಾಟ ಪರದಾಟ ನಡೆಸುತ್ತಿದ್ದಾರೆ. ಇಂದಿಗೂ ಸಮಸ್ಯೆ ಸರಿಪಡಿಸಿ ಬಿಟಿಡಿಎ ಸಿಬ್ಬಂದಿ ಪಹಣಿ ನೀಡುತ್ತಿಲ್ಲ.
ಪೆಬ್ರುವರಿ ೧೦ ರಂದು ಗೂಳಪ್ಪ ಅವರ ಮಗನ ಮದುವೆ ಇದೆ. ಈ ಹಿನ್ನೆಲೆ ಘೂಳಪ್ಪ ಬ್ಯಾಂಕನಿಂದ ಸಾಲ ಪಡೆಯಲು ಘೂಳಪ್ಪ ಮುಂದಾದಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಇ ಖಾತೆ ಇಲ್ಲದೆ ಸಾಲ ಸಿಗುತ್ತಿಲ್ಲ. ಬಿಟಿಡಿಎ ಅವರು ನನ್ನ ಹಕ್ಕು ಪತ್ರ ಮತ್ತೊಬ್ಬರಿಗೆ ನೀಡಿದ್ದಾರೆ. ಅದನ್ನು ಸರಿಪಡಿಸಿ ಇಖಾತೆ ಮಾಡಿಕೊಡುತ್ತಿಲ್ಲ. ಸಾಲ ಸಿಗದಿದ್ದರೆ ಮಗನ ಮದುವೆ ಮಾಡೋದಕ್ಕೆ ಹಣವಿಲ್ಲ ಎಂದು ಘೂಳಪ್ಪ ಗೋಳಾಟ ನಡೆಸಿದ್ದಾರೆ.
ಇನ್ನೊಂದೆಡೆ ಮಾಯವ್ವ ಮುಂಡೆವಾಡಿ ಎಂಬ ಮಹಿಳೆ ಕೂಡ
ಎರಡು ವರ್ಷದಿಂದ ಹಕ್ಕು ಪತ್ರಕ್ಕಾಗಿ ಅಲೆದಾಟ ನಡೆಸಿದ್ದಾಳೆ. ಹಕ್ಕುಪತ್ರ ಇ ಖಾತೆಗಾಗಿ ಪ್ರತಿನಿತ್ಯ ಬಾಗಲಕೋಟೆ ಜನರು ಅಲೆದಾಟ ನಡೆಸುತ್ತಿದ್ದಾರೆ. ಬಿಟಿಡಿಎ ಕಚೇರಿಯಲ್ಲಿ ವಿಕಲಚೇತನ ಘೂಳಪ್ಪ ಹಾಗೂ ವಿಕಲಚೇತನ ಸಾಮಾಜಿಕ ಹೋರಾಟಗಾರ ಘನಶ್ಯಾಮ ಬಾಂಡಗೆ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಗೆ ಜನರು ಕೂಡ ಸಾಥ್ ನೀಡಿದ್ದು, ಸಮಸ್ಯೆ ಸರಿಪಡಿಸುವವರೆಗೂ ಪ್ರತಿಭಟನೆ ಕೈ ಬಿಡೋದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿಗಳು ಕಾರ್ಯಾಲಯವನ್ನು ಬಿಟ್ಟು ಹೊರ ತೆರಳಿದ್ದು, ಟೇಬಲ್ ಕುರ್ಚಿ ಎಲ್ಲವೂ ಖಾಲಿ ಖಾಲಿಯಾಗಿವೆ.