ಜಮಖಂಡಿ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದ್ದು ರೋಗಿಗಳು ಪರದಾಡುವಂತಾಗಿದೆ. ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಜಮಖಂಡಿ ತಾಲೂಕ ಆಸ್ಪತ್ರೆಯಲ್ಲಿ ಸ್ವಚ್ಛತೆ ದೂರಾ ದೂರ. ಮೂಗು ಕಣ್ಣು ಮುಚ್ಚಿಕೊಂಡೇ ತಿರುಗಾಡುವ ಪರಿಸ್ಥಿತಿ ಶೌಚಾಲಯಗಳಂತೂ ಗಬ್ಬುನಾರುತ್ತಿವೆ ರೋಗಿಗಳು ಅವುಗಳನ್ನು ಬಳಸುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ. ಗುಟ್ಕಾ ಎಲೆ ಅಡಿಕೆ ತಿಂದು ಎಲ್ಲಿ ಬೇಕೆಂದರಲ್ಲಿ ಉಗಳಿದ್ದಾರೆ ಆಸ್ಪತ್ರೆ ಒಳಗೆ ಹೊರಗೆ ಕಸದ ರಾಶಿ ತುಂಬಿದೆ ಇದನ್ನೆಲ್ಲ ನೋಡಿದರೂ ಕಾಣದವರಂತೆ ಇರುವ ಸಿಬ್ಬಂದಿ ಸ್ವಚ್ಛ ಮಾಡುವ ಗೋಜಿಗೆ ಹೋಗಿಲ್ಲ.
ಈ ಅವ್ಯವಸ್ಥೆಯಿಂದ ರೋಷಿ ಹೋಗಿರುವ ರೋಗಿಗಳು ಹಾಗೂ ಸಾರ್ವಜನಿಕರು ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಿದ್ದು ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಅಭಿಮತವಾಗಿದೆ.