ಕೇವಲ ಊಟದ ಪ್ಲೇಟ್ ತಾಗಿದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಯುವಕರ ಗುಂಪೊಂದು ಎರಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ಸೇವಾಲಾಲ್ ಜಯಂತಿಯ ವೇಳೆ ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದ ಬಳಿ ನಡೆದಿದೆ.

ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದ ಪೊಲೀಸ್ ಭವನದ ಎದುರಿಗೆ ಕಳೆದ ಸಂಜೆ ಸೇವಾಲಾಲ್ ಜಯಂತಿಯ ಬಳಿಕ ಊಟದ ಪ್ಲೇಟು ತಾಗಿದ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದೆ. ತಪ್ಪಾಯಿತು ಬಿಡಿ ಎಂದು ಕೇಳಿದರೂ ಅಮಾನವಿಯವಾಗಿ ಥಳಿಸಲಾಗಿದೆ. ತಮ್ಮ ಮಗಳಿಗೆ ಜ್ಯೂಸ್ ಕೊಡಿಸಲೆಂದು ಡ್ಯೂಟಿಯ ನಂತರ ತೆರಳಿದ್ದ ಪೊಲೀಸ್ ಸಿಬ್ಬಂದಿ ಇದನ್ನು ಕಂಡು ಅವರನ್ನು ಹಲ್ಲೆಯನ್ನು ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಆದರೇ ಅವರು ಜಗ್ಗ ಗುಂಪು ಹಲ್ಲೆ ನಡೆಸಿದೆ.
ನಂತರ 112 ವಾಹನ ಬಂದ ಬಳಿಕ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.