ಹುಕ್ಕೇರಿ : ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೋಲಿಸ್ ಠಾಣೆ ಹದ್ದಿನ ನೆರ್ಲಿ ಗ್ರಾಮದ ಹತ್ತಿರ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಹುಕ್ಕೇರಿ ಸಮಿಪದ ನೇರಲಿ ಗ್ರಾಮ ಹದ್ದಿಯ ನೆರ್ಲಿ ಹೆಬ್ಬಾಳ ರಸ್ತೆಯ ಪಕ್ಕದಲ್ಲಿ ಇರುವ ಜಮೀನದಲ್ಲಿ ಅಂದಾಜು 50 ರಿಂದ 60 ವಯಸ್ಸಿನ ಅಪರಿಚಿತ ಗಂಡಸಿನ ಶವ ದೊರೆತಿದ್ದು…. ಶವದ ಮೈಮೇಲೆ ಬಿಳಿ ಮುಂಡಾ ಹಾಗೂ ಹಸಿರು ಬಣ್ಣದ ಚಡ್ಡಿ ಧರಿಸಿದ್ದು… ಮುಖದ ಮೇಲೆ ಚಿಕ್ಕ ಪ್ರಮಾಣದಲ್ಲಿ ಬಿಳಿ ಮೀಸೆ ಹಾಗೂ ಗಡ್ಡ ಇದ್ದು ಗುರುತು ಪತ್ತೆಯಾದಲ್ಲಿ ಸಂಕೇಶ್ವರ ಪೋಲೀಸ ಠಾಣೆಗೆ ಸಂಪರ್ಕಿಸಲು ಇನ್ಸಪೇಕ್ಟರ ಶಿವ ಶಂಕರ ಅವಜಿ ವಿನಂತಿಸಿದ್ದಾರೆ.