ಖಾನಾಪೂರ ತಾಲೂಕು ನಂದಗಡದಲ್ಲಿ ನಡೆಯುತ್ತಿರುವ ಗ್ರಾಮದೇವಿ ಶ್ರೀ ಮಹಾಲಕ್ಷ್ಮಿ ಜಾತ್ರೆಯಲ್ಲಿ ಸಂಪ್ರದಾಯದಂತೆ ಇಂದು ಅಂಬಲಿ ಚಕ್ಕಡಿಗಳ ಮೆರವಣಿಗೆ ನಡೆಯಿತು.

ಕಳೆದ ಒಂದು ವಾರದಿಂದ ಖಾನಾಪೂರ ತಾಲೂಕು ನಂದಗಡ ಗ್ರಾಮದೇವಿ ಶ್ರೀ ಮಹಾಲಕ್ಷ್ಮೀ ಜಾತ್ರೆ ಅತ್ಯಂತ ವಿಜ್ರಂಭಣೆಯಿಂದ ಜರುಗುತ್ತಲಿದೆ. ಜಾತ್ರೆಯ ನಿಮಿತ್ಯ ಸಂಪ್ರದಾಯದಂತೆ ಇಂದು ಅಂಬಲಿ ಚಕ್ಕಡಿಗಳ ಮೆರವಣಿಗೆಯು ಭವ್ಯವಾಗಿ ನಡೆಯಿತು. ಜಾನಪದ ಕಲಾ ಮೇಳಗಳು ಸುಮಂಗಲೆಯರು ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತರಾದರು.