ಅಪರಾಧ ಪ್ರಕರಣಗಳ ಮೂಲಕ ಸುದ್ದಿಯಲ್ಲಿರುವ ವಿಜಯಪುರ ಮತ್ತೆ ಫೈರಿಂಗ್ ಮೂಲಕ ಸುದ್ದಿಯಲ್ಲಿದೆ. ಈ ಬಾರಿ ಫೈರಿಂಗ್ ಮಾಡಿದ್ದು ಹಂತಕರಲ್ಲಾ, ಹಂತಕರಿಗೆ ಪೈರಿಂಗ್ ಮಾಡಿದ್ದು ಪೊಲೀಸರು. ಕೊಲೆ ಪ್ರಕರಣದ ಆರೋಪಿಗೆ ಕಂಟ್ರಿ ಪಿಸ್ತೂಲ್ ಒದಗಿಸಿದ ಆರೋಪಿ ಬಂಧಿಸಲು ಹೋದಾಗ ಪೊಲೀಸರು ಫೈರಿಂಗ್ ಮಾಡಿ ತಮ್ಮ ಖದರ್ ತೋರಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಕಳೆದ ಜನೆವರಿ 28 ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಎಲ್ ಟಿ 1 ರ ಮಾನವರದೊಡ್ಡಿ ಬಳಿ ನಡೆದಿದ್ದ ಶೂಟೌಟ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸತೀಶ ರಾಠೋಡ್ ಕೊಲೆ ಪ್ರಕರಣ ಆರೋಪಿಗೆ ಪೈರಿಂಗ್ ಮಾಡಿದ್ದಾರೆ.ಆರೋಪಿ ಸುರೇಶ ರಾಠೋಡ್ ಕಾಲಿಗೆ ಗುಂಡು ತಗುಲಿದೆ. ವಿಜಯಪುರ ನಗರದ ಹೊರ ಭಾಗದ ಮಹಿಳಾ ವಿವಿ ಬಳಿ ಘಟನೆ ನಡೆದಿದೆ. ಕೊಲೆಗೆ ಕಂಟ್ರಿ ಪಿಸ್ತೂಲು ಸಪ್ಲೈ ಮಾಡಿದ್ದ ಆರೋಪಿ ಸುರೇಶ್ ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ವಿನೋದ ತಮ್ಮ ಜೀವ ರಕ್ಷಣೆ ಸುರೇಶ ಮೇಲೆ ಗುಂಡು ಹಾರಿಸಿದ್ದಾರೆ.
ಖಚಿತ ಮಾಹಿತಿ ಪಡೆದು ಬಂಧಿಸಲು ತೆರಳಿದ್ದ ವಿಜಯಪುರ ಗ್ರಾಮೀಣ ಪೊಲೀಸರ ಮೇಲೆ ಪೊಲೀಸರ ಮೇಲೆ ಚಾಕೂನಿಂದ ದಾಳಿ ಮಾಡಿದ ಸುರೇಶನ ಮೇಲೆ ಪೊಲೀಸರು ತಮ್ಮ ಖದರ್ ತೋರಿದ್ದಾರೆ. ಸತೀಶ್ ಕೊಲೆಗೆ ಕಂಟ್ರೀ ಪಿಸ್ತೂಲ್ ಪೂರೈಕೆ ಮಾಡಿದ್ದ, ಮದ್ಯಪ್ರದೇಶದಿಂದ ಕಂಟ್ರೀ ಪಿಸ್ತೂಲ್ ತಂದು ಕೊಟ್ಟಿದ್ದ ಆರೋಪಿ ಸುರೇಶ ರಾಠೋಡ್ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿದ್ದ. ಈ ಫೈರಿಂಗ್ ನಲ್ಲಿ ಪಿಎಸೈ ವಿನೋದ ದೊಡಮನಿ ಹಾಗೂ ಒರ್ವ ಸಿಬ್ಬಂದಿಗೆ ಗಾಯಗಳಾಗಿವೆ. ಸದ್ಯ ನಗರದ ಖಾಸಗಿ ಆಸ್ಪತ್ರೆಗೆ ಪಿಎಸೈ ಹಾಗೂ ಪೊಲೀಸ್ ಕಾನ್ಸಸ್ಟೇಬಲ್ ದಾಖಲಿಸಲಾಗಿದೆ. ಆಸ್ಪತ್ರೆಗೆ ಎಸ್ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರ ಅಧಿಕಾರಿಗಳ ಭೇಟಿ ನೀಡಿದ್ದಾರೆ.
ಪಿಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಆರೋಗ್ಯ ವಿಚಾರಣೆ ಮಾಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಪಿ ಲಕ್ಷ್ಮಣ ನಿಂಬರಗಿ, ಕಳೆದ 28 ರಂದು ಸತೀಶ ರಾಠೋಡ್ ಕೊಲೆ ನಡೆದಿತ್ತು. ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಸುರೇಶ ಬಂಧಿಸಲು ಹೋದಾಗ ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ, ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಕೈಗೆ ಗಾಯವಾಗಿದೆ. ಜೀವ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದರು. ಗುಂಡೇಟಿನಿಂದ ಗಾಯಗೊಂಡ ಸುರೇಶನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.
ಒಟ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಪೊಲೀಸರು ತಮ್ಮ ಪಿಸ್ತೂಲ್ ಮೂಲಕ ಉತ್ತರಿಸುತ್ತಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.