ಆಧುನಿಕ ಯುಗದಲ್ಲಿ ಗ್ರಾಮೀಣ ಕಲೆಗಳು ನಶಿಸಿ ಹೋಗ್ತಿವೆ. ಬೈಲಾಟ, ನಾಟಕಗಳು ಅಳಿವಿನಂಚಿನಲ್ಲಿವೆ. ಈ ನಡುವೆ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ನಡೆಯುತ್ತಿರುವ ಮಾಘ ಸಪ್ತಾಹದಲ್ಲಿ ಬೈಲಾಟಗಳ ಪ್ರದರ್ಶನ ನಡೆಯಿತು. ಮಠದ ಆವರಣದ 200 ಮೀ ಒಂದರಂತೆ 10ಕ್ಕು ಅಧಿಕ ಬೈಲಾಟಗಳು ಪ್ರದರ್ಶನಗೊಂಡವು. ಶ್ರೀಕೃಷ್ಣ ಪಾರಿಜಾತ, ವೀರ ಸಿಂಧೂರ ಲಕ್ಷ್ಮಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂಗ್ಯಾ-ಬಾಳ್ಯಾ, ಭಕ್ತ ಮಾರ್ಕಂಡೇಯ, ಗೌಡರ ದರ್ಬಾರ್ ಸೇರಿದಂತೆ ಹಲವು ಬೈಲಾಟಗಳ ಪ್ರದರ್ಶನ ನಡೆಯಿತು. ಇನ್ನೂ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ಭಕ್ತರು ಇಡೀ ರಾತ್ರಿ ಬೈಲಾಟಗಳ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.. ಹುಬ್ಬಳ್ಳಿ, ನರಗುಂದ, ಕೊಪ್ಪಳ, ಮಹಾರಾಷ್ಟ್ರದ ಜತ್ತ ಭಾಗಗಳಿಂದ ಬಂದಿದ್ದ ಕಲಾವಿದರಿಂದ ಬೈಲಾಟಗಳ ಪ್ರದರ್ಶನ ನಡೆಯಿತು.