ಹುಬ್ಬಳ್ಳಿಯಲ್ಲಿ ಬರ್ತ್‌ಡೇ ದಿನವೇ ಕ್ಷುಲಕ ವಿಚಾರಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ನಡೆದಿದೆ.
ನಿನ್ನೆ ರಾತ್ರಿ ವೇಳೆ ಜನ್ಮ ದಿನದ ಆಚರಣೆ ವೇಳೆ ಬೇರೊಂದು ಗುಂಪಿನ ವ್ಯಕ್ತಿಗಳ ಜೊತೆ ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜೇಬಿಉಲ್ಲಾ ಬಳ್ಳಾರಿ ಎಂಬ ವ್ಯಕ್ತಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.
ಹಲ್ಲೆಗೆ ಒಳಗಾದ ವ್ಯಕ್ತಿ ಜೇಬಿಉಲ್ಲಾನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್ ಬೇಟಿ ನೀಡಿದ್ದಾರೆ. ಈ ಕುರಿತು ಎಎಂಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ