ಬಸವನಾಡಯ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ನಾಲ್ಕು ದಿನಗಳ ಕಾಲ ನಡೆದ ಜಾತ್ಯಾತೀತ ಜಾತ್ರೆ ಮುಕ್ತಾಯವಾಗಿದೆ. ಮಾಘ ಮಾಸದಲ್ಲಿ ನಡೆಯುವ ಈ ಸಪ್ತಾಹದಲ್ಲಿ ಹಿಂದೂ-ಮುಸ್ಲಿಂ ಭೇದವಿಲ್ಲದೆ ಪಾಲ್ಗೊಳ್ತಾರೆ. ವಿಶೇಷ ಎಂದರೇ ಮುಸ್ಲಿಂ ಸಮುದಾಯದ ಭಕ್ತರು ಮಠದ ೧೧ ಗುರುಗಳ ಗದ್ದುಗೆ ದರ್ಶನ ಮಾಡಿ, ಆರತಿಯನ್ನು ಮಾಡ್ತಾರೆ.
ಇನ್ನು ೩೫ ವರ್ಷಗಳ ಹಿಂದೆ ಇಂಚಗೇರಿ ಮಠದ ಗುರುಗಳಾಗಿದ್ದ ಮಾಧವಾನಂದ ಪ್ರಭುಜಿಗಳು ತಮ್ಮ ಸ್ವಂತ ಮೊಮ್ಮಗಳು ಕಾಳಮ್ಮದೇವಿಯನ್ನ ಮುಸ್ಲಿಂ ಸಮುದಾಯದ ಆದಮ್ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಕರ್ನಾಟಕ ಮಹಾರಾಷ್ಟ್ರದ ಸಾವಿರಾರು ಹಿಂದೂ ಮುಸ್ಲಿಂ ಭಕ್ತರು ಸಪ್ತಾಹದಲ್ಲಿ ಪಾಲ್ಗೊಳ್ತಾರೆ. ಹೀಗಾಗಿ ಈ ಸಪ್ತಾಹ ಜಾತ್ಯಾತೀತ ಜಾತ್ರೆ ಅಂತಲೇ ಫೇಮಸ್ ಆಗಿದೆ..