Dharwad

ಧಾರವಾಡದ ಗರಗ ಶ್ರೀ ಮಡಿವಾಳ ಅಜ್ಜನ ರಥೋತ್ಸವಕ್ಕೆ ಹರಿದು ಬಂದ ಭಕ್ತರ ದಂಡು…..

Share

ಪವಾಡ ಪುರುಷ ಧಾರವಾಡ ಗರಗದ ಮಡಿವಾಳಜ್ಜನವರ ರಥೋತ್ಸವ ಶನಿವಾರ ಲಕ್ಷಾಂತರ ಭಕ್ತಾದಿಗಳ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತ್ತು. ರಥೋತ್ಸವಕ್ಕೆ ಭಕ್ತರ ದಂಡು ಬಂದಿದ್ದು, ಗದ್ದುಗೆ ದರ್ಶನ ಪಡೆದು ಸಂಜೆ ಜರುಗಿದ ರಥೋತ್ಸವದಲ್ಲಿ ಭಾಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.

ಉತ್ತರ ಕರ್ನಾಟಕ ಭಾಗದಲ್ಲೇ ಧಾರವಾಡದ ಗರಗದ ಮಡಿವಾಳಪ್ಪನವರ ರಥೋತ್ಸವ ಕೂಡ ಪ್ರಮುಖವಾಗಿದೆ. ಈ ಜಾತ್ರೆಗೆ ಧಾರವಾಡ ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಪ್ರಸಕ್ತ ವರ್ಷ ಪ್ರಯಾಗರಾಜನಲ್ಲಿ 144ನೇ ವರ್ಷಕೊಮ್ಮೆ ನಡೆ ಮಾಹಾಕುಂಬ ಮೇಳೆ ಸುಭ ಸಂದರ್ಭದಲ್ಲಿ, ಇಲ್ಲಿ ಮಡಿವಾಳಪ್ಪನವರ 144ನೇ ವರ್ಷದ ಪುಣ್ಯಾರಾಧನೆ ಕೂಡ ಇದಾಗಿರುವುದು ವಿಶೇವಾಗಿದೆ. ಶನಿವಾರ ಮಡಿವಾಳಪ್ಪನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಡಿವಾಳಪ್ಪನವರ ಕರ್ತೃ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶುಕ್ರವಾರ ಸಂಜೆಯಿಂದಲೇ ಬೇರೆ ಬೇರೆ ಊರುಗಳಿಂದ ಜನ ಎತ್ತು, ಚಕ್ಕಡಿ, ಟ್ರ್ಯಾಕ್ಟರ್‌ಗಳನ್ನು ಹೂಡಿಕೊಂಡು ಬಂದು ಮಡಿವಾಳೇಶ್ವರ ಮಠದ ಆವರಣದಲ್ಲಿ ವಸತಿ ಮಾಡಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮಡಿವಾಳೇಶ್ವರರ ಕರ್ತೃ ಗದ್ದುಗೆಯಿಂದ ರಥೋತ್ಸವಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದರು.

ಅಲ್ಲಿಂದ ಲಕ್ಷಾಂತರ ಭಕ್ತರ ಹರ್ಷೋದ್ಘಾರಗಳ ಮಧ್ಯೆ ಎಳೆಯಲ್ಪಟ್ಟ ರಥವು ಪಾದಗಟ್ಟಿವರೆಗೂ ಸಾಗಿತು. ತೇರು ಎಳೆಯುತ್ತಿದ್ದಂತೆ ಸೇರಿದ್ದ ಭಕ್ತರ ದಂಡು ತೇರಿಗೆ ಉತ್ತುತ್ತಿ, ಬಾಳೆಹಣ್ಣು ಹಾಗೂ ನಿಂಬೆಹಣ್ಣು ತೂರಿ ಮಡಿವಾಳೇಶ್ವರರಿಗೆ ಭಕ್ತಿಯ ಸಮರ್ಪನೆಯೊಂದಿಗೆ ಇಷ್ಟಾರ್ಥ ಸಿದ್ಧಿಗಾಗಿ‌ಪ್ರಾರ್ಥನೆ ಮಾಡಿಕೊಂಡರು.‌ ಧಾರವಾಡ ಜಿಲ್ಲೆ ಸೇರಿ ಬೆಳಗಾವಿ, ಗದಗ, ಹಾವೇರಿ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಜನ ಜಾತ್ರೆಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಇನ್ನೂ ಜಾತ್ರಾ ಮಹೋತ್ಸವದ ಅಂಗವಾಗಿ ಗರಗ ಪೊಲೀಸ್ ಠಾಣೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು.

Tags:

error: Content is protected !!