Belagavi

ಹೌದು … ನಾವು ಜಾತ್ರೆಯನ್ನೇ ಮಾಡುತ್ತಿದ್ದೇವೆ; ಯತ್ನಾಳಗೆ ಡಿಕೆಶಿ ತಿರುಗೇಟು…

Share

ಕಾಂಗ್ರೆಸ್ ಸರ್ಕಾರಿ ದುಡ್ಡಲ್ಲಿ ಜಾತ್ರೆ ಮಾಡುತ್ತಿದೆ ಎಂಬ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರ ಟೀಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಹೌದು ನಾವು ಖಂಡಿತ ಜಾತ್ರೆಯನ್ನೇ ಮಾಡುತ್ತಿದ್ದೇವೆ. ಶುಭವಾಗಲಿ ಎಂದು ಜಾತ್ರೆಗಳನ್ನು ಮಾಡಲಾಗುತ್ತೆ. ಅದನ್ನೇ ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರಿ ದುಡ್ಡಲ್ಲಿ ಜಾತ್ರೆ ಮಾಡುತ್ತಿದೆ ಎಂಬ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು ಹೌದು ನಾವು ಖಂಡಿತ ಜಾತ್ರೆಯನ್ನೇ ಮಾಡುತ್ತಿದ್ದೇವೆ. ಶುಭವಾಗಲಿ ಎಂದು ಜಾತ್ರೆಗಳನ್ನು ಮಾಡಲಾಗುತ್ತೆ. ಅದನ್ನೇ ನಾವು ಮಾಡುತ್ತಿದ್ದೇವೆ. ಸಂಕ್ರಾಂತಿ ಹಬ್ಬದಲ್ಲಿ ಹೇಗೆ ರೈತರ ಬದುಕನ್ನು ಉಜ್ವಲಗೊಳಿಸಲು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ 100 ವರ್ಷದ ಸಂಭ್ರಮಾಚರಣೆ ಮೂಲಕ ಹೊಸ ಶಕ್ತಿಯನ್ನು ತುಂಬಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಇನ್ನು ಸುವರ್ಣಸೌಧದೆದುರು ಮಹಾತ್ಮಾ ಗಾಂಧಿಜೀಯವರ ಮೂರ್ತಿ ಅನಾವರಣ ನಡೆಯಲಿದೆ. ಅದಾದ ಬಳಿಕ ಮಧ್ಯಾನ್ಹ ಸಿಎಂ ಅವರ ಸ್ನೇಹಭೋಜನದ ಬಳಿಕ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮ ನಡೆಯಲಿದೆ. ಗಾಂಧಿಜೀ ಅವರ ತತ್ವ ಉಳಿಸಬೇಕು. ಅವರ ಆದರ್ಶಗಳನ್ನು ಉಳಿಸಬೇಕು. ಡಾ. ಬಾಬಾಸಾಹೇಬರು ನೀಡಿದ ಸಂವಿಧಾನದ ಕೊಡುಗೆ, ನೀತಿ, ಉಪದೇಶ ಮತ್ತು ಸಂವಿಧಾನವನ್ನು ರಕ್ಷಣೆ ಮಾಡಬೇಕು. ಇದು ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ಇಡೀ ದೇಶವೇ ಕಾಂಗ್ರೆಸನ ನೀತಿಪಾಠವನ್ನು ಒಪ್ಪಿಕೊಂಡಿದೆ. ಇದನ್ನು ಮುಂದುವರೆಸಿಕೊಂಡು ಹೋಗಿ ಯುವಪೀಳಿಗೆಗೆ ತಿಳಿಸಬೇಕಾಗಿದೆ ಎಂದರು.

ಇನ್ನು ಇಲ್ಲಸಲ್ಲದ ಊಹಾಪೋಹಗಳನ್ನು ಸೃಷ್ಠಿಸಿ ಟಿ.ವಿ.ಮಾಧ್ಯಮದವರು ತಮ್ಮ ಇಮೇಜನ್ನು ಹಾಳು ಮಾಡಿಕೊಳ್ಳಬೇಡಿ. ಯಾರ್ಯಾರೋ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲ್ಲ ಎಂದರು.

Tags:

error: Content is protected !!