Chikkodi

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಯಡೂರ ವೀರಭದ್ರೇಶ್ವರ ಮಹಾರಥೋತ್ಸವ

Share

ಚಿಕ್ಕೋಡಿ ತಾಲೂಕಿನ ಯಡೂರ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀವೀರಭದ್ರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀವೀರಭದ್ರೇಶ್ವರ ಮಹಾರಥೋತ್ಸವಕ್ಕೆ ಶ್ರೀಶೈಲ್ ಜದ್ಗುರುಗಳ ಸಾನಿಧ್ಯದಲ್ಲಿ ಅಬ್ಬೆ ತುಮಕೂರ ಸಿದ್ದಸಂಸ್ಥಾನ ಮಠದ ಡಾ! ಗಂಗಾದರ ಶಿವಾಚಾರ್ಯ ಸ್ವಾಮೀಜಿಯವರು ಚಾಲನೆ ನೀಡಿದರು. ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಭಕ್ತಿಯ ಪರಾಕಾಷ್ಠೆಯ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಥ ಹೋಗುತ್ತಿದ್ದಂತೆ ಭಕ್ತರು ರಥದ ಮೇಲೆ ಖಾರಿಕ, ಕೊಬ್ಬರಿ ,ಬಾಳೆಹಣ್ಣು, ಸಕ್ಕರೆ ಯನ್ನು ಅತ್ಯಂತ ಭಕ್ತಿ ಭಾವದಿಂದ ಅರ್ಪಿಸಿದರು. ಸಕಲ ವಾದ್ಯ ಮೇಳ,ಆನೆ, ಕುದುರೆ,ಎತ್ತು ರಥೋತ್ಸವ ಉದ್ದಕ್ಕೂ ಗಮನ ಸೆಳೆದವು.

ರಥ ಹೋಗುತ್ತಿದ್ದಂತೆ ಭಕ್ತರು ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ, ಹರ ಹರ ಮಹಾದೇವ ಘೋಷಣೆಗಳು ಮುಗಿಲ ಮುಟ್ಟಿದವು. ರಥವನ್ನು ಎಳೆಯಲು ಭಕ್ತ ಸಮೂಹವೇ ಸೇರಿತು.ಇನ್ನು ಹೆಚ್ಚಿನ ಪ್ರಮಾಣದಲ್ಲಿ ಯುವಕರು ನಾ ಮುಂದೆ ನೀ ಮುಂದೆ ಎನ್ನುತ್ತಾ ಅತ್ಯಂತ ಭಕ್ತಿಯಿಂದ ರಥವನ್ನು ಎಳೆದರು.ವೀರಭದ್ರ ದೇವಸ್ಥಾನದ ಮೂಲಕ ಪ್ರಾರಂಭವಾದ ರಥೋತ್ಸವ ಚೆನ್ನಮ್ಮ ವೃತ್ತದ ಮೂಲಕ ಹಳೆ ಯಡೂರ ಬಸವೇಶ್ವರ ದೇವಸ್ಥಾನವರಿಗೆ ಸಾಗಿ ಮತ್ತೆ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಬಂದು ಮಹಾರಥೋತ್ಸವ ಸಂಪನ್ನಗೊಂಡಿತು. ಮಹಾರಥೋತ್ಸವ ಸಂಪನ್ನಗೊಳ್ಳುತ್ತಿದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ನೇತೃತ್ವದಲ್ಲಿ ಸಿಪಿಐ ವಿಶ್ವನಾಥ ಚೌಗಲಾ,2 ಜನ ಪಿಎಸ್ಐ ಸೇರಿ 60 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ರಥೋತ್ಸವದಲ್ಲಿ ಬಂಡಿಗಣಿಯ ಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು,ಹೂಲಿ ಹಿರೇಮಠದ ಉಮೇಶ್ವರ ಸ್ವಾಮೀಜಿ, ಮೈಸಾಳದ ಶಿವಾಚಾರ್ಯ ಸ್ವಾಮೀಜಿ, ಮಾಂಜರಿ ಶ್ರೀಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ಸ್ವಾಮೀಜಿ, ನೂಲ ಮಠದ ಗುರುಸಿದ್ದೇಶ್ವರ ಸ್ವಾಮೀಜಿ,ಮುದನೂರ ಮಠದ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ,ಕಬ್ಬೂರದ ಗೌರಿಶಂಕರ ಸ್ವಾಮೀಜಿ,ಕರಿಬಂಟನಾಳದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Tags:

error: Content is protected !!