hubbali

ಹೈಕಮಾಂಡ್ ಹಾಗೂ ಪಕ್ಷದವರ ಒಪ್ಪಿ ನನ್ನ ಸಿಎಂ ಮಾಡ್ತಾರೆ ಅಂದರೆ ಆಗುತ್ತೇನೆ- ಆರ್ ಬಿ‌ತಿಮ್ಮಾಪುರ

Share

ಸಿಎಂ‌ ಆಗಬೇಕಾದ್ರೆ ಮೊದಲು ಸಿಎಲ್ ಪಿ‌ ನಾಯಕರಾಗಬೇಕು. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು ಅದರದೇಯಾದ ಪ್ರಸ್ಯೂಜರ್ ಇದೆ. ಒಂದುವೇಳೆ ಪಕ್ಷದ ನಾಯಕರು, ಹೈಕಮಾಂಡ್ ಒಪ್ಪಿಕೊಂಡು ನನಗೆ ಸಿಎಂ ಸ್ಥಾನದ ಜವಾಬ್ದಾರಿ ನೀಡಿದ್ದರೆ ಒಪ್ಪಿಕೊಳ್ಳುತ್ತೇನೆ ಎಂದು ಸಚಿವ ಆರ್ ಬಿ‌ತಿಮ್ಮಾಪುರು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ‌ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿಎಂ ಆಗಿ ಸಿದ್ದರಾಮಯ್ಯನವರು ಇದ್ದಾರೆ. ಪ್ರಸ್ತುತ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಅಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ಸಿದ್ದರಾಮಯ್ಯನವರು ನಮ್ಮ ನಾಯಕರಾಗಿದ್ದಾರೆ. ಅವರೇ ಈ ಅವಧಿ ಪೂರ್ಣ ಮಾಡುವ ವಿಶ್ವಾಸವಿದೆ. ಇನ್ನೂ ದಲಿತ ಸಿಎಂ ಕೂಗು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಮುದಾಯವಾರು ನಾಯಕರು ತಮ್ಮ‌ಅಭಿಪ್ರಾಯ ಹಂಚಿಕೊಳ್ಳುವುದು ಸಹಜ, ಹಾಗೇ ದಲಿತ ಸಮುದಾಯದಲ್ಲೂ ಸಿಎಂ ಸ್ಥಾನಕ್ಕೆ ದಲಿತರಿದ್ದಾರೆ ಎಂದು ಹೇಳಲಾಗಿದೆ. ನಾನು ಕೂಡಾ ಪಕ್ಷ ಹಾಗೂ ಹೈಕಮಾಂಡ ಒಪ್ಪಿ ಜವಾಬ್ದಾರಿ ನೀಡಿದ್ದರೆ ನಿಭಾಯಿಸುತ್ತೇನೆ ಎಂದಿರುವೆ.

ಅದಕ್ಕೆ ಈಗಲೂ ನಾನು ಬದ್ಧವಾಗಿದ್ದೇನೆ. ಸದ್ಯಕ್ಕೆ ಸಿಎಂ ಕುರ್ಚಿ ಈಗ ಖಾಲಿ ಇಲ್ಲ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಜತೆಗೆ ಸತೀಶ ಜಾರಕಿಹೊಳಿ ಸಿಎಂ ಆದರೆ ಒಳ್ಳೆಯದು. ಸಿಎಂ‌ ಆಗಲು ಜಾರಕಿಹೊಳಿ ಅವ್ರು ಸಮರ್ಥರಾಗಿದ್ದಾರೆ, ಸಿಎಂ ಆದಲ್ಲಿ ಪಕ್ಷಕ್ಕೆ ಒಳ್ಳಿತು ಆಗುತ್ತೆ. ಹೈಕಮಾಂಡ ಏನಾದ್ರೂ ನನ್ನ ‌ಒಪ್ಪಿದರೆ ನಾನು ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಕುರ್ಚಿಗೆ ಆಸೆ ಹೊರಹಾಕಿದ್ದಾರೆ.

 

Tags:

error: Content is protected !!