ಬರದ ನಾಡು, ಬರಗಾಲ ಪೀಡಿತ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಇದೀಗ ಗಂಗೆಯು ಆಕಾಶದೆತ್ತರಕ್ಕೆ ಜಿಗಿಯುತ್ತಿದ್ದಾಳೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಿರಣ ಹಿರೇಮಠ ಅವರ ಹೊಲದಲ್ಲಿ ಬೋರ್ ವೆಲ್ ಕೋರಿಸಿದಾಗ ನೀರು ಆಕಾಶದೆತ್ತರಕ್ಕೆ ಜಿಗಿದು ಆಶ್ಚರ್ಯದ ಜೊತೆಗೆ ರೈತರಿಗೆ ಸಂತಸ ತರುತ್ತಿದೆ. ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ರ ದೂರದೃಷ್ಟಿಯ ಕೆರೆ ತುಂಬುವ ಯೋಜನೆಗಳು, ನಮ್ಮ ರೈತರ ಕನಸುಗಳಿಗೆ ಜೀವ ನೀಡಿವೆ ಎಂಬುದಕ್ಕೆ ಬಬಲೇಶ್ವರ ಮತ ಕ್ಷೇತ್ರದಲ್ಲಿ ನೂರಾರು ಉದಾಹರಣೆಗಳನ್ನು ಕಾಣಬಹುದಾಗಿದೆ.

ಬಬಲೇಶ್ವರದ ಕಿರಣ ಹಿರೇಮಠ ಅವರ ಹೊಲದಲ್ಲಿ ಬೋರ್ ವೆಲ್ ಕೊರೆಸಿದಾಗ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು, ಅವರು ಸಂತಸಗೊಂಡಿದ್ದಾರೆ. ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳು ವಿಜಯಪುರ ಜಿಲ್ಲೆಯ ರೈತರ ಜೀವನದಲ್ಲಿ ಬದಲಾವಣೆ ತರುತ್ತಿದೆ. ಈ ಕುರಿತು ಸಚಿವ ಎಂ.ಬಿ.ಪಾಟೀಲ ಮುಗಿಲೆತ್ತರಕ್ಕೆ ಜಿಗಿದ ನೀರಿನ ವಿಡಿಯೋ ಶೇರ್ ಮಾಡಿ ನನಗೂ ತೃಪ್ತಿ ತಂದಿದೆ ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.