Belagavi

ಕೇಂದ್ರ ಸಚಿವ ಪಲ್ಹಾದ ಜೋಷಿ ರೈಲು ಮಂಡಳದೊಂದಿಗೆ ಮಹತ್ವದ ಸಭೆ…

Share

ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರೊಂದಿಗೆ ಮಹತ್ವ ಸಭೆಯನ್ನು ನಡೆಸಲಾಗಿದ್ದು, ವಂದೇ ಭಾರತ ರೈಲು ಸೇವೆಯ ತಾಂತ್ರಿಕ ಸಮಸ್ಯೆಗಳನ್ನು ನೀಗಿಸುವಂತೆ ರೈಲು ಮಂಡಳದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳಿನಿಂದ ಬೆಳಗಾವಿ-ಬೆಂಗಳೂರು ರೈಲು ಸೇವೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಶಾಸಕ ಅಭಯ ಪಾಟೀಲ್ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ರೇಲ್ವೆ ಮಂಡಳದ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ವಂದೇ ಭಾರತ ರೇಲ್ವೆ ಸೇವೆ ಮುಂಜಾನೆಯಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ಸಂಜೆ ಬೆಳಗಾವಿಗೆ ಆಗಮಿಸಬೇಕೆಂಬ ಬೆಳಗಾವಿಗರ ಬೇಡಿಕೆಯನ್ನು ಸಂಸದ ಜಗದೀಶ ಶೆಟ್ಟರ್ ಹಾಗೂ ತಾವು ಎಲ್ಲರ ಗಮನಕ್ಕೆ ತಂದಿದ್ದೇವೆ. ತಾಂತ್ರಿಕ ಅಡಚಣೆಗಳನ್ನು ದೂರಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಸೂಚಿಸಿದ್ದಾರೆ. ಮುಂದಿನ ತಿಂಗಳಿನಿಂದ ವಂದೇ ಭಾರತ ರೈಲು ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ ಎಂದರು. ಇನ್ನು ಸವದತ್ತಿ ಧಾರವಾಡ ರೈಲು ಸೇವೆಯ ಕುರಿತು ಕೂಡ ಚರ್ಚೆ ನಡೆಸಲಾಗಿದೆ.

ಸುವರ್ಣಸೌಧದಿಂದ ಓರ್ವ ಎಂ.ಎಲ್.ಸಿಯನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಬಂಧಿಸಿದ್ದಾರೆ. ಜನಪ್ರತಿನಿಧಿಗಳ ಪರಿಸ್ಥಿತಿಯೇ ಈ ರೀತಿಯಾದರೇ ಇನ್ನು ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಏನಾಗಬಹುದೆಂದು ಕಾರ್ಯಕರ್ತರಲ್ಲಿ ಭಾವನೆ ಮೂಡ ತೊಡಗಿದ್ದು, ಪಕ್ಷದ ವರಿಷ್ಠರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ಜನಪ್ರತಿನಿಧಿಗೆ ಬಂದ ಪರಿಸ್ಥಿತಿ ನಾಳೆ ಬೇರೆ ನಾಯಕರಿಗೂ ಈ ಪರಿಸ್ಥಿತಿ ಬರಬಹುದು. ಇನ್ನು ಕಾಲ ಮಿಂಚಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದರು

Tags:

error: Content is protected !!