Vijaypura

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ವಿರುದ್ದ ಕಠಿಣವಾದ ಕಾನೂನು: ಸಿಬಿಐ ಬಿಜೆಪಿಯರ ಮನೆದು ಅಂತಾನಾ?: ಸಚಿವ ಎಂಬಿಪಿ

Share

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ವಿರುದ್ದ ಕಠಿಣವಾದ ಕಾನೂನು ತರುತ್ತೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮ ಗಳ ಜೊತೆಗೆ ಮಾತನಾಡಿದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಕುರಿತು ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ನಿನ್ನೆ ನಡೆದ ಕ್ಯಾಬಿನೆಟ್ ನಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲರಿಗೆ, ಗೃಹ ಸಚಿವ ಪರಮೇಶ್ವರರಿಗೆ ಹಾಗೂ ಕಂದಾಯ ಸಚಿವ ಬೈರೆಗೌಡರಿಗೆ ಸ್ಪಷ್ಟವಾದ ಸೂಚನೆ ಕೊಟ್ಟಿದ್ದಾರೆ. ಅತಿಯಾದಂತ ಮೈಕ್ರೋ ಫೈನಾನ್ಸ್ ಹಾವಳಿ ಇದಾಗಿದೆ, ಅತ್ಯಂತ ಕಠಿಣ ಕ್ರಮಗಳನ್ನು ತಗೊಂಡು, ಬಹಳ ಬಲಿಷ್ಠವಾದ ಕಾನೂನು ತರುವಂತಹದ್ದನ್ನು ಮುಖ್ಯಮಂತ್ರಿ ಗಳು ಬಹಳ ಗಂಭೀರ ನಿರ್ದೇಶನ ನಮ್ಮ ಸಮಕ್ಷಮ ನೀಡಿದ್ದಾರೆ. ನಮ್ಮ ಸರ್ಕಾರ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇನ್ನೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮೈಕ್ರೊ ಫೈನಾನ್ಸ್ ಹಾವಳಿ ವಿರುದ್ಧ ಬಿಲ್ ಬಗ್ಗೆ ಎಚ್‌ಡಿಕೆ ಹೇಳಿಕೆ.

ಅವರ ಬಿಲ್ ಏನಾಯ್ತು ಎಂಬ ಹೇಳಿಕೆಗೆ ಕುಮಾರಸ್ವಾಮಿ ಬಿಲ್ ವರ್ಕ್ ಆಗ್ತಿಲ್ಲಾ, ಅದಕ್ಕಾಗಿ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಚಿವ ಸಂಪುಟ ವಿಸ್ತರಣೆ ಸಿಎಂ ಸಿದ್ದರಾಮಯ್ಯ ಹಾಗೂ ಹೈ ಕಮಾಂಡ್‌ಗೆ ಬಿಟ್ಟಿದ್ದು. ಸಂಪುಟ ವಿಸ್ತರಣೆ ಸಿಎಂ ಸಿದ್ದರಾಮಯ್ಯ ಪರಮಾಧಿಕಾರ ಇರುತ್ತದೆ. ನನಗೆ ಕೇಳಿದ್ರೇ ನಾನೇನು ಹೇಳಲಿ ಎಂದು ತಿಳಿಸಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲಿನ್ ಚೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಿಬಿಐ ಬಿಜೆಪಿಯರ ಮನೆದು ಅಂತಾ..? ಲೋಕಾಯುಕ್ತರ ಮೇಲೆ ಬಿಜೆಪಿಗೆ ವಿಶ್ವಾಸ ಇಲ್ವಾ ಇವರಿಗೆ ಎಂದು ಪ್ರಶ್ನಿಸಿದರು. ಲೋಕಾಯುಕ್ತರು ನಿರ್ಣಯ ಕೊಟ್ಮೇಲೆ ಸಿಬಿಐ ಕೇಸ್ ಏನು ಅನ್ನೊದು ಗೊತ್ತಾಗುತ್ತದೆ ಎಂದು ತಿಳಿಸಿದರು.

Tags:

error: Content is protected !!