Vijaypura

ನಡೆದಾಡಲಿಕ್ಕೂ ನರಳಾಡ್ತಿದ್ದಾರೆ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದವರು

Share

ಗುಮ್ಮಟನಗರಿ ವಿಜಯಪುರದಲ್ಲಿ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಐದು ಗಂಟೆಗಲ್ಲೇ ಹಲ್ಲೆಕೋರರ ಬಂಧನ ಮಾಡಿ ಪೊಲೀಸ್ ಟ್ರೀಟ್ಮಿಂಟ್ ನೀಡಿದ್ದಾರೆ. ಕಾರ್ಮಿಕರ ಕಾಲಿಗೆ ಏಟು ಕೊಟ್ಟುವರು ಇಂದು ನಡಿಯೋಕು ನರಳ್ತಾಡ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರದ ಗಾಂಧಿನಗರದ ಬಳಿಕ ಇಟ್ಟಿಗೆ ಕಾರ್ಖಾನೆಯಲ್ಲಿ ನಡೆದ ಅಮಾನವೀಯ ಘಟನೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಕಾರ್ಮಿಕರಿಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ ಇಟ್ಟಿಗೆ ಮಾಲೀಕ ಖೇಮು ರಾಠೋಡ್ ಸೇರಿದಂತೆ ಐವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಗೆ ಸರಿಯಾಗಿಗೇ ಟ್ರೀಟ್ಮೇಂಟ್ ನೀಡಿದ್ದಾರೆ. ನಿನ್ನೆ ಪೈಪ್ ನಿಂದ ಕಾರ್ಮಿಕರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದವರು, ಇಂದು ನಡಿಯೋಕು ನರಳಾಡುತ್ತಿದ್ದಾರೆ. ಘಟನೆ ಬಳಿಕ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿರುವ ಪೊಲೀಸರ ಕ್ರಮಕ್ಕೆ ದಲಿತ ಸಂಘಟನೆ ಮುಖಂಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ‌. ಜೊತೆಗೆ ಆರೋಪಿಗಳ ಪರವಾಗಿ ಯಾರೆ ರಾಜಕೀಯ ನಾಯಕರು ಒತ್ತಡ ಹಾಕಿದರೂ ಬಿಡಬಾರದು ಎಂದು ಮನವಿ ಮಾಡಿದ್ದಾರೆ.

ಇನ್ನು ಘಟನೆ ಬಳಿಕ ಖೇಮು ರಾಠೋಡ್ ನ ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಬಿಟ್ಟು ಊರು ಸೇರಿದ್ದಾರೆ. ಹಲ್ಲೆ ವಿಡಿಯೋ ನೋಡಿ ಭಯದಲ್ಲಿದ್ದಾರೆ. ಮಾಲೀಕರು ಈ ರೀತಿ ಹಲ್ಲೆ ಮಾಡಿದರೆ ನಾವೇನು ಮಾಡೋದು ಎಂದು ಕುಟುಂಬದ ಸಮೇತ ಕೆಲಸ ಬಿಟ್ಟು ಹೋಗಿದ್ದಾರೆ. ಸದ್ಯ ಈ ಪ್ರದೇಶ ಖಾಲಿ ಖಾಲಿಯಾಗಿದೆ. ಇದರ ಜೊತೆಗೆ ಖೇಮು ರಾಠೋಡ್ ನಿಂದ ಹಲ್ಲೆಯ ಘಟನೆ ಬಳಿಕ ಇಟ್ಟಿಗೆ ಭಟ್ಟಿ ಮಾಲೀಕರು ಆತಂಕದಲ್ಲಿದ್ದಾರೆ. ನಾವು ಸಹ ಕಾರ್ಮಿಕರಿಗೆ ಅಡ್ವಾನ್ಸ್ಡ್ ಹಣ ನೀಡಿರುತ್ತೇವೆ. ಆಗ ಕಾರ್ಮಿಕರು ಕೆಲಸಕ್ಕೆ ಬರದೆ ಹೋದರೆ ಅವರನ್ನು ಪ್ರಶ್ನೆ ಮಾಡದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುತ್ತೇವೆ. ಕಾರ್ಮಿಕರು ಅಡ್ವಾನ್ಸ್ಡ್ ರೂಪದಲ್ಲಿ ಹಣ ಪಡೆದು ಮೋಸ ಮಾಡಿ ಇಲ್ಲಿಂದ ಪರಾರಿಯಾಗುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಸದ್ಯ ಈ ಘಟನೆ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದರ ಜೊತೆಗೆ ಮಾಲೀಕರರಿಗೂ ಸಹ ಅಡ್ವಾನ್ಸ್ಡ್ ನೀಡಿದ ಹಣ ವಾಪಸ್ ಕೇಳಬೇಕೋ ಬೇಡವೋ ಅನ್ನೋ ಗೊಂದಲದಲ್ಲಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ..

Tags:

error: Content is protected !!