ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದನ್ನು ಪ್ರಶ್ನೆ ಮಾಡಿದಕ್ಕೆ ಇಡೀ ಕುಟುಂಬವನ್ನೇ ಪುಡಿ ರೌಡಿಗಳು ಮನೆಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಮೂವರು ಓರ್ವ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಮಿನ್ ಫ್ಲ್ಯಾಟ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಹ್ಮದ್ ಶಾಹಿದ್ ಎಂಬ ಯುವಕನೇ ಹಲ್ಲೆಗೊಳಗಾಗಿದ್ದು ಈತ ತನ್ನ ಮನೆಯ ಪಕ್ಕದಲ್ಲಿನ ಸರ್ಕಾರಿ ಜಾಗದಲ್ಲಿ ಶಾದಿಕ್ ಎಂಬಾತ ಪಾನ ಶಾಪ್ ಇಟ್ಟಿದ್ದ ಇದನ್ನು ಮೊಹ್ಮದ್ ಶಾಹಿದ್ ಪ್ರಶ್ನೆ ಮಾಡಿದ್ದ ಹೀಗಾಗಿ ಇದರಿಂದ ಕುಪಿತಗೊಂಡ ಶಾದಿಕ್ ತನ್ನ ಜೊತೆ 10ಕ್ಕೂ ಹೆಚ್ಚು ಸಹಚರರ ಜೊತೆ ಸೇರಿಕೊಂಡು ಮಹ್ಮದ್ ಶಾದಿಕ್ ಹಾಗೂ ಆತನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಮೊಹ್ಮದ್ ಶಾದಿಕ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಸದ್ಯ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ದ್ರಶ್ಯಗಳನ್ನು ಆಧರಿಸಿ ಕಮರಿಪೇಟ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು. ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.