Belagavi

ಅದ್ಧೂರಿಯಾಗಿ ಸುವರ್ಣಸೌಧದೆದುರು ಅನಾವರಣಗೊಂಡ “ ಮಹಾತ್ಮಾ ಗಾಂಧಿಜೀ” ಯವರ ಮೂರ್ತಿ…

Share

ಬೆಳಗಾವಿಯ ಸುವರ್ಣಸೌಧ ಎದುರು ಮಹಾತ್ಮಾ ಗಾಂಧಿಜೀಯವರ ಬೃಹತ್ ಮೂರ್ತಿಯ ಅನಾವರಣವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ನಾವು ಸಂವಿಧಾನ ಪರವಾದವರು… ಬಿಜೆಪಿಗರು ಸಂವಿಧಾನದ ವಿರೋಧಿಗಳು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

 

ವೇದಿಕೆಯ ಮೇಲೆ ಎಐಸಿಸಿ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಗಾಂಧಿ, ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ್, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್, ಗೃಹ ಸಚಿವರಾದ ಜಿ. ಪರಮೇಶ್ವರ, ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ವಿಧಾನಸಭೆಯ ಸಭಾಪತಿಗಳಾದ ಯು.ಟಿ ಖಾದರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೊಂದು ಐತಿಹಾಸಿಕ ಕಾರ್ಯಕ್ರಮ . ಅಖಂಡ ಭಾರತದ ನಿರ್ಮಾಣಕ್ಕಾಗಿ ಹುತಾತ್ಮರಾದವರನ್ನು ಸ್ಮರಿಸುವ ಅಪೂರ್ವದಿನವಾಗಿದೆ ಎಂದರು. ನಾವೆಲ್ಲರೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿರುವುದು ಸೌಭಾಗ್ಯ ಎಂದರು.

ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯೆಯಾದ ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟೀಲ್ ಇನ್ನುಳಿದವರು ಗಾಂಧಿ ಚರಕದಿಂದ ನೂಲನ್ನು ನೇಯ್ದು, ಮಹಾತ್ಮಾ ಗಾಂಧಿಜೀಯವರ ಭವ್ಯ ಮೂರ್ತಿಯ ಅನಾವರಣವನ್ನು ಮಾಡಲಾಯಿತು.

ಗದಗನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಮಹಾತ್ಮಾ ಗಾಂಧಿಜೀ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡಿ, ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಇನ್ನು ರಾಜ್ಯ ಸಭಾ ಸದಸ್ಯರು ಮತ್ತು ಎಐಇಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಬೆಳಗಾವಿಯ ಸುವರ್ಣಸೌಧದ ಎದುರು ಮಹಾತ್ಮಾ ಗಾಂಧಿಜೀಯವರ ಮೂರ್ತಿಯನ್ನು ನಿರ್ಮಿಸಿ ಸಂಪೂರ್ಣ ರಾಜ್ಯಕ್ಕೆ ಗೌರವ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಗಾಂಧಿಜೀಯವರು ದೇಶದಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಬಳಿಕ ಮಾಜಿ ಪ್ರಧಾನಿ ನೆಹರು ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರರ ಕಾಲದಲ್ಲಿ ಸಂವಿಧಾನವನ್ನು ದೇಶಕ್ಕೆ ನೀಡಲಾಗಿದೆ. ಇದನ್ನ ರಕ್ಷಿಸುವ ಕೆಲಸ ನಮ್ಮ ನಿಮ್ಮೆಲ್ಲರದ್ದಾಗಿದೆ ಎಂದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಲ್ಲದೇ ಹೋದರೇ ದೇಶದಲ್ಲೇ ಅರಾಜಕತೆ ನಿರ್ಮಾಣವಾಗುತ್ತಿತ್ತು. ದೇಶವನ್ನು ಕಟ್ಟುವ ಘೋಷಣೆಯನ್ನು ಗಾಂಧಿಜೀಯವರು ಬೆಳಗಾವಿಯಲ್ಲೇ ಮೊದಲಬಾರಿಗೆ ನೀಡಿದ್ದು ಎಂದರು.

ಇನ್ನು ಸಿಎಂ ಸಿದ್ಧರಾಮಯ್ಯನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ಇಂದು ಮಹಾತ್ಮಾ ಗಾಂಧಿಜೀಯವರ ಮೂರ್ತಿಯನ್ನು ಅನಾವರಣಗೊಳಿಸಿ ಎಲ್ಲರನ್ನು ಅಭಿನಂದಿಸಿದರು. ಮಹಾತ್ಮಾ ಗಾಂಧಿಜೀಯವರು 1924 ರ ಬೆಳಗಾವಿಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕದ ಭೂಮಿಯಲ್ಲಿ ತಮ್ಮ ಜೀವಮಾನದಲ್ಲೇ ಒಂದೇ ಬಾರಿ ರಾಷ್ಟ್ರೀಯ ಕಾಂಗ್ರೆಸ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದರು. ಸತ್ಯ, ಅಹಿಂಸೆಯ ತತ್ವಗಳನ್ನು ಗಾಂಧಿಜೀ ಭಿತ್ತರಿಸಿದರು. ಮಹಾತ್ಮಾ ಗಾಂಧಿಜೀಯವರನ್ನು ಬಿಜೆಪಿಗರು ಹಿಂದೂ ವಿರೋಧಿ ಎನ್ನುತ್ತಾರೆ. ಆದರೇ, ಜೀವಮಾನದಲ್ಲಿ ಮತ್ತು ಗೋಡ್ಸೆ ಅವರು ಗುಂಡು ಹೊಡೆದಾಗ ಜೀವವನ್ನು ತ್ಯಜಿಸವಾಗಲೂ ಹೇ ರಾಮ ಎಂದಿದ್ದರು. ತಮ್ಮ ಜೀವನದುದ್ದಕ್ಕೂ ದೇಶದ ಏಳ್ಗೆಯನ್ನು ಬಯಸಿದ್ದರು. ಕಾಂಗ್ರೆಸ್ಸಿಗರು ಸಂವಿಧಾನದ ಪರವಾಗಿದ್ದವರು. ಬಿಜೆಪಿ ಸಂವಿಧಾನ ವಿರೋಧವಾಗಿದ್ದವರು. ಸಂವಿಧಾನವನ್ನು ರಕ್ಷಿಸಿದರೇ ಅದು ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನವನ್ನು ದುರ್ಬಲಗೊಳಿಸಲು ಯಾವತ್ತೂ ಅವಕಾಶ ನೀಡಬಾರದು ಎಂದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕೊನೆಯಲ್ಲಿ ವಂದನಾರ್ಪಣೆಯನ್ನು ನೆರವೇರಿಸಿದರು.

ಈ ವೇಳೆ ಸಂಸದರು, ಶಾಸಕರು, ಸ್ವಾತಂತ್ರ್ಯ ಸೇನಾನಿಗಳು ಅವರ ಕುಟುಂಬಸ್ಥರು, ಮಾಜಿ ಶಾಸಕರು, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!