ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು ಇದರಿಂದಾಗಿ ಜನತೆ ರೋಸಿ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸದಸ್ಯ ಬಸವರಾಜ ಬೊಮ್ಮಾಯಿ ಹೇಳಿದರು

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮೈಕ್ರೋ ಫೈನಾನ್ಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಸರ್ಕಾರ ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಸಾಕಷ್ಟು ಜನರು ಕಿರುಕುಳದಿಂದ ಆತ್ಮಹತ್ಯ ಮಾಡಿಕೊಳ್ತಾ ಇದ್ದಾರೆ ಮಹಿಳೆಯರು ಮಾಂಗಲ್ಯ ಮಾರುತ್ತಾ ಇದ್ದಾರೆ ಎಂದ ಅವರುಒಂದು ಕಡೆ ಮಹಿಳೆಯರ ಬಗ್ಗೆ ಕಾಳಜಿ ವಹಿಸುತ್ತೇವೆ ಅಂತಾರೆ ಇನ್ನೊಂದು ಕಡೆ ಕಿತ್ತುಕೊಳ್ತಾ ಇದ್ದಾರೆ
ಮಹಿಳೆಯರು ಇದರಿಂದ ಬೇಸತ್ತು ಹೋಗಿದ್ದಾರೆ
ಈ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಿದೆ ಎಂದರು ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಾಗೆ ಮೈಸೂರು ನಗರಾಭಿವೃದ್ಧಿ ಇಲಾಖೆಯ
(ಮುಡಾ)ಹಗರಣ ಕ್ಲಿನ್ ಚಿಟ್ ವಿಚಾರಕ್ಕೆ ಮಾಜಿ ಸಿಎಂ ಬೊಮ್ಮಾಯಿ ಈ ಕುರಿತುಅಧಿಕೃತವಾಗಿ ಬರಲಿ ಆಮೇಲೆ ಮಾತಾಡ್ತೇನೆ ಎಂದರು. ಇನ್ನು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಶ್ರೀರಾಮುಲು ಕಾಂಗ್ರೆಸ್ ಗೆ ಸೇರ್ಪಡೆ ವಿಚಾರಕ್ಕೆ ಬೊಮ್ಮಾಯಿ ನಕಾರ ವ್ಯಕ್ತಪಡಿಸಿದರು. ಇನ್ನು ಕೋರ್ ಕಮಿಟಿ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಣೆ ವ್ಯಕ್ತಪಡಿಸಿದರು.