ಮಾರಾಟವಾದ ಮಗುವನ್ನು ತಾಯಿಗೆ ಮರಳಿ ಕೊಡಿಸುವಲ್ಲಿ ಹುಕ್ಕೇರಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು.ಈ ಪ್ರಕರಣದಲ್ಲಿ ಎರಡನೇ ಮದುವೆ ನೆಪವೊಡ್ಡಿ ಮದುವೆ ಮಾಡಿಸಿದ ದಳ್ಳಾಳಿ ನಾನು ಮಗು ನೋಡಿಕೊಳ್ಳುತ್ತೇನೆ ಎಂದು ಮಗು ಮಾರಾಟ ಮಾಡಿದ್ದ. ಮೂರು ತಿಂಗಳ ಬಳಿಕ ಮಗು ತಾಯಿ ನನಗೆ ನನ್ನ ಮಗು ಬೇಕು ಎಂದು ಹುಕ್ಕೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಳು.
ಕೊಲ್ಲಾಪುರದ ಸಂಗೀತಾ ಹಳಿಯಾಳದ ಅನಸೂಯಾ ಎಂಬ ಮಹಿಳೆಗೆ ನೀಡಿದ್ದಳು. ಆ ಮಗುವನ್ನು ಬೆಳಗಾವಿಯ ದಿಲಶಾದ್ ಗೆ ನಾಲ್ಕು ಲಕ್ಷ ರೂ. ಗೆ ಮಗು ಮಾರಾಟ ಮಾಡಲಾಗಿತ್ತು. ಆದರೆ ಈ ಮಗು ಮಾರಾಟ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ. ಮಗು ಅನಾಥೆವಾಗಿದೆ. ಮಗುವನ್ನು ಲಾಲನೆ, ಪಾಲನೆ ಮಾಡುತ್ತೇವೆ ಎಂದು ಮಗು ಮಾರಾಟ ಮಾಡಿದ್ದಾರೆ ಎಂದರು. ಸುಲ್ತಾನಪುರದ ಸಂಗೀತಾ ತನ್ನ ಮಗು ಬೇಕೆಂದು ಒಂದು ಎನ್ ಜಿಒ ಮೂಲಕ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದರು.