ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಅರ್ಧಭಾಗ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೇ, ಕತ್ತಲಲ್ಲಿ ಮುಳುಗುತ್ತಿದೆ. ವಿದ್ಯುತ್ ಕಂಬ ಸ್ಥಳಾಂತರದ ನೆವ ಹೇಳಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಸಂಜೆ ಕೇವಲ 5 ನಿಮಿಷಗಳ ಕಾಲ ವಿದ್ಯುತ್ ಪೂರೈಕೆ ಮಾಡಿ ಮತ್ತೇ ಕಡಿತಗೊಳಿಸಿದ್ದರಿಂದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ ವಿದ್ಯುತ್ ಕಂಬ ಸ್ಥಳಾಂತರಿಸಲು ಕಡಿತಗೊಂಡ ವಿದ್ಯುತ್ ಸಂಪರ್ಕ ಸಂಜೆ ಕೇವಲ 5 ನಿಮಿಷ ಮಾತ್ರ ಮರು ಜೋಡಿಸಲಾಗಿದೆ. ಈಗ ಮತ್ತೇ ಗ್ರಾಮದಲ್ಲಿ ಕತ್ತಲೆ ಆವರಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಗ್ರಾಮ ಪಂಚಾಯಿತಿ ಸದಸ್ಯೆ ನಿಖತ ಪರ್ಮಿನ್ ತಹಶೀಲ್ದಾರ್ ಅವರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಜನರಿಗೆ ಸಾಕಷ್ಟು ತೊಂದರೆಯುಂಟಾಗುತ್ತಿದೆ. ಲೈನಮನಗೆ ಕರೆ ಮಾಡಿದರೇ ಬೆಳಗಾವಿಯಲ್ಲಿದ್ದೇನೆ ಎಂದು ಉತ್ತರ ನೀಡುತ್ತಿದ್ದಾನೆ. ಸೆಕ್ಷನ್ ಅಧಿಕಾರಿಯವರಿಗೆ ಪೋನ್ ಮಾಡಿದರೆ ನಮ್ಮಲ್ಲಿ ರಾತ್ರಿ ಲೈನ್ ಮೇನ್ ವ್ಯವಸ್ಥೆ ಇರುವುದಿಲ್ಲ ಎನ್ನುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಶಾಸಕರು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದಿದ್ದರು. ಆವಾಗ ಹೆಸ್ಕಾಂ ವಿರುದ್ಧ ದೂರುಗಳನ್ನು ನೀಡಿದ್ರೂ ಯಾರೂ ಕ್ರಮಕೈಗೊಂಡಿಲ್ಲ. ರಾತ್ರಿಯ ವೇಳೆ ಏನಾದ್ರೂ ಅನಾಹುತಗಳಾದರೇ ಯಾರು ಜವಾಬ್ದಾರಿ ಕೂಡಲೇ ಹೆಸ್ಕಾಂ ಸ್ಪಂದಿಸಬೇಕೆಂದರು.