ಹುಕ್ಕೇರಿ ತಾಲೂಕಿನ ದಲಿತರ ಬಹುದಿನಗಳ ಬೇಡಿಕೆ ಇಂದು ಇಡೆರಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.
ಅವರು ಇಂದು ಹುಕ್ಕೇರಿ ನಗರದ ಕೋರ್ಟ ಸರ್ಕಲ್ ಬಳಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಜರುಗಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಹುಕ್ಕೇರಿ ತಾಲೂಕಿನ ದಲಿತರ ಬಹುದಿನಗಳ ಬೇಡಿಕೆಯಾದ ಡಾ, ಬಾಬಾಸಾಹೇಬರ ಪುತ್ಥಳಿ ನಿರ್ಮಾಣಕ್ಕೆ ಇಂದು ನಾನು ಮತ್ತು ಜಿಲ್ಲೆಯ ಸಚಿವರ, ಶಾಸಕರ ಉಪಸ್ಥಿತಿಯಲ್ಲಿ ಅನಾವರಣ ಮಾಡಲಾಗಿದೆ ಎಂದರು .
ನಂತರ ಮಾಜಿ ಸಂಸದ ರಮೇಶ ಕತ್ತಿ ಮುಖ್ಯ ದ್ವಾರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅಂಬೇಡ್ಕರ್ ಉದ್ಯಾನವನ ಉದ್ಘಾಟಿಸಿದರೆ ಸತೀಶ ಜಾರಕಿಹೋಳಿ ಮತ್ತು ಎಚ್ ಸಿ ಮಹಾದೇವಪ್ಪ ಬೃಹತ್ ಆಕಾರದ ಅಂಬೇಡ್ಕರ್ ಪ್ರತಿಮೇಗೆ ಪುಷ್ಪ ಹಾರಿಸಿ ಮಾಲಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ್ ನಗರದಿಂದ ಬಾಬಾಸಾಹೇಬ ಅಂಬೇಡ್ಕರ್ ರವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ ಹಾಗೂ ಬಂತೆ ಬಿಕ್ಕೂ ಜ್ಞಾನ ಜ್ಯೋತಿ ಶ್ರೀಗಳನ್ನು ರಥದಲ್ಲಿ ಮೇರವಣೆಗೆ ಮೂಲಕ ವಾದ್ಯ ಮೇಳಗಳೊಂದಿಗೆ ಬರಮಾಡಿಕೋಳ್ಳಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಅದ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೆಶಕ ಸುರೇಶ ತಳವಾರ, ಕೆ ಡಿ ಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ, ದೀಲಿಪ ಹೋಸಮನಿ, ಶಿವಾನಂದ ಮರಿನಾಯ್ಕ, ಉದಯ ಹುಕ್ಕೇರಿ, ಪ್ರಕಾಶ ಮೈಲಾಖೆ, ರಮೇಶ ಹುಂಜಿ, ಸದಾ ಕಾಂಬಳೆ, ಅಕ್ಷಯ ವೀರಮುಖ, ಕೆಂಪಣ್ಣಾ ಶಿರಹಟ್ಟಿ, ಶಂಕರ ತಿಪ್ಪನಾಯ್ಕ, ಮುಯೂರ ತಳವಾರ, ಬಹುಸಾಹೇಬ ಪಾಂಡ್ರೆ,ರಾಜೇಂದ್ರ ಮೋಶಿ ಮೊದಲಾದವರು ಉಪಸ್ಥಿತರಿದ್ದರು.