Kagawad

ಶೇಡಬಾಳ ಪಟ್ಟಣದ ಕಾಗವಾಡ ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿರುವ  ಅತಿಕ್ರಮಣವನ್ನು ತಹಶೀಲ್ದಾರ ರಾಜೇಶ ಬುರ್ಲಿ ಇವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. 

Share
ಕಾಗವಾಡ ಜಮಖಂಡಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿಯ ಉಗಾರ – ಕಾಗವಾಡ ಮಧ್ಯದ ರಸ್ತೆ ಅಗಲೀಕರಣ ಮತ್ತು ಅಭಿವೃದ್ದಿಗಾಗಿ ೩೦ ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರುಗೊಳಿಸಿ ಕಾರ್ಯ ಪ್ರಾರಂಭವಾಗಿದೆ ಆದರೆ ಶೇಡಬಾಳ ಪಟ್ಟಣದಲ್ಲಿ ರಸ್ತೆ ಬಳಿ ಸರಕಾರಿ ಜಾಗೆಯಲ್ಲಿ ಅನಧಿಕೃತವಾಗಿ ಕೆಲವರು ಕಟ್ಟಡಗಳು ನಿರ್ಮಿಸಿದರು ಇವುಗಳನ್ನು ಅಥಣಿ ತಾಲೂಕ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಕ ಅಭಿಯಂತ ಜಯಾನಂದ ಹೀರೇಮಠ ಇವರ ಉಪಸ್ಥಿತಿಯಲ್ಲಿ ತಹಶಿಲ್ದಾರ ರಾಜೇಶ ಬುರ್ಲಿ ಇವರ ನೇತೃತ್ವದಲ್ಲಿ ತೆರೆವಿಗೊಳಿಸಲು ಯಶ್ವಸಿಯಾದರು.
ಶನಿವಾರ ಮಧ್ಯಾಹ್ನ ತೆರೆವುಗೊಳಿಸುವ ಕಾರ್ಯಚರಣೆ ಪ್ರಾರಂಬಿಸಿದ್ದರು ಕಳೆದ ಕೆಲ ತಿಂಗಳುಗಳಿ0ದ ಅತಿಕ್ರಮಣ ನಿರ್ಮಿಸಿದವರಿಗೆ ಸೂಚನೆ ನೀಡಿದ್ದರು ಆದರು ಅವರು ತಮ್ಮ ಕಟ್ಟಡಗಳು ತೆರೆವುಗೊಳಿಸಿರಲಿಲ್ಲಾ ರಸ್ತೆ ಅಗಲೀಕರಣ ಕಾಮಗಾರಿಗೆ ತೊಂದರೆಯಾಗುತ್ತದೆ ೩೦ ಕೋಟಿ ರೂ ಅನುದಾನದಲ್ಲಿ ದೊಂಡಿಮಡ್ಡಿ ಗುಡ್ಡ ೧೫ ಫೂಟ್ ಎತ್ತರದ ಕೊರೆದು ರಸ್ತೆ ನಿರ್ಮಿಸಲಾಗುತ್ತಿದೆ ಈ ಕಾಮಗಾರಿಗೆ ಪ್ರತಿಯೊಬ್ಬರು ಸಹಕಾರ ನೀಡುವವುದು ಅಗತ್ಯವಿದೆ ಎಂದು ತಹಶಿಲ್ದಾರ ರಾಜೇಶ ಬುರ್ಲಿ ಹೇಳಿದರು.
ಶೇಡಬಾಳ ಪಟ್ಟಣ ಪಂಚಾಯತಿಯ ಅಧ್ಯಕ್ಷ ಉತ್ಕರ್ಷ ಪಾಟೀಲ ಮುಖ್ಯ ಅಧಿಕಾರಿ ಸುರೇಶ ಪತ್ತಾರ, ಸಹಾಯಕ  ಅಧಿಕಾರಿ ವೆಂಕಟೇಶ, ಗುರುಪ್ರಸಾದ ಹಿರೇಮಠ, ಇವರು ಸಹಕರಿಸಿದರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರಾದ ಎಮ್.ಎನ್.ಮಗದುಮ್ಮ ಸೇರಿದಮತೆ ಅನೇಕರು ತೆರೆವುಗೊಳಿಸಲು ಸಹಕರಿಸಿದ್ದರು ಕಾಗವಾಡ ಪಿ.ಎನ್.ಐ ಗಂಗಾ ಬಿರಾದರ ತಮ್ಮ ಪೋಲಿಸ ಸಿಬ್ಬಂದಿಗಳೊAದಿಗೆ ಬಿಗಿ ಬಂದೂ ಬಸ್ತ ಕೈಗೊಂಡಿದ್ದರು.
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ

Tags:

error: Content is protected !!