ಹುಕ್ಕೇರಿ ತಾಲೂಕಿನಲ್ಲಿ ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಕಾಮಗಾರಿ ಪ್ರಾರಂಭವಾಗಿ ಹತ್ತು ತಿಂಗಳು ಕಳೆದವು, ಗುತ್ತಿಗೆದಾರ ಪೈಪ್ ಲೈನ್ ಹಾಕಲು ರೈತರ ಜಮಿನು ಸುಮಾರು ನಾಲ್ಕು ಅಡಿ ತಗ್ಗು ಅಗೆದು ಮೂರು ತಿಂಗಳು ಗತಿಸಿದವು ಆದರೆ ಜಮೀನಿನಲ್ಲಿ ಅಗೆದ ಕಾಲುವೆಗೆ ಪೈಪ್ ಅಳವಡಿಸಿ ಮಣ್ಣು ಮುಚ್ಚದೆ ವಿಳಂಬ ಮಾಡುತ್ತಿರುವದರಿಂದ ಎಮ್ಮೆ ,ಆಕಳು , ಕುರಿಗಳು ಗುಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡಿವೆ ಅಲ್ಲದೆ ಒಂದು ಎತ್ತು ಸಾವನ್ನಪ್ಪಿದೆ ಅಲ್ಲದೆ ಜಮೀನುಗಳ ನಡುವೆ ಕಾಲುವೆ ಅಗೆದಿದ್ದರಿಂದ ಹೋಗಲು ದಾರಿ ಇಲ್ಲದೆ ಕೆಲ ರೈತರು ಬಿತ್ತನೆ ಮಾಡದೆ ಜಮೀನು ಪಾಳು ಬಿಟ್ಟಿದ್ದಾರೆ .

ಗುತ್ತಿಗೆದಾರ ದೂರದ ವಿಜಯಪೂರ ಜಿಲ್ಲೆಯವನಾಗಿದ್ದರಿಂದ ರೈತರ ಕೈಗೆ ಸಿಗುತ್ತಿಲ್ಲ, ಪೋನ ಮಾಡಿದರೆ ಸಂಪರ್ಕಕ್ಕೆ ಬರುತ್ತಿಲ್ಲಾ , ಕೆಲ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡದೆ ತಮ್ಮ ದನ ಕರುಗಳನು ಮೇಯಿಸಲು ಹೋರಗೆ ಬಿಡದೆ ಗುತ್ತಿಗೆದಾರನ ದಾರಿ ಕಾಯುತ್ತಿದ್ದಾರೆ ಸರಕಾರದ ಈ ಕ್ರಮಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಹಿತರಕ್ಷಣಾ ವೇದಿಕೆ ಮುಖಂಡ ತಮ್ಮಣ್ಣಾ ಪಾಟೀಲ ಕಳೆದ 8 ತಿಂಗಳಿನಿಂದ ಹುಕ್ಕೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಜಮಿನು ಅಗೆದು ಹೋದ ಗುತ್ತಿಗೆದಾರ ಇತ್ತ ಬಂದಿಲ್ಲಾ ಅಗೆದ ತಗ್ಗುಗಳಲ್ಲಿ ನಮ್ಮ ದನಕರುಗಳು ಬಿದ್ದು ಗಾಯ ಮಾಡಿಕೊಂಡಿವೆ ಒಂದು ಎತ್ತು ನಿಧನ ಹೊಂದಿದೆ ರಾತ್ರಿ ಸಮಯದಲ್ಲಿ ಹೋಲಕ್ಕೆ ನೀರು ಬಿಡಲು ಹೋದರೆ ನಾವೆ ಆಯ ತಪ್ಪಿ ಗುಂಡಿಯಲ್ಲಿ ಬಿಳುವ ಪರಿಸ್ಥಿತಿ ಬಂದಿದೆ ಕೂಡಲೆ ಗುತ್ತಿಗೆದಾರ ಬಂದು ಬಿತ್ತನೆ ಮಾಡದ ಮತ್ತು ಗಾಯಗೊಂಡ ಹಾಗೂ ಸತ್ತ ದನ ಕರುಗಳ ಮಾಲಿಕರುಗೆ ಪರಿಹಾರ ನೀಡಬೇಕು, ದುಫದಾಳ ನಿರಾವರಿ ಇಲಾಖೆ ಅಭಿಯಂತರ ಸಾಧೀಕ ಮುಲ್ಲಾ ಇವರಿಗೆ ಭೇಟಿ ಯಾಗಲು ಹೋದರೆ ಅವರ ದರ್ಶನವಾಗುತ್ತಿಲ್ಲಾ ಫೋನ ಮುಖಾಂತರ ಸಿಗುತ್ತಿಲ್ಲಾ ಎಂದು ತಮ್ಮ ಅಳಲು ತೊಡಿಕೊಂಡರು ಇದೆ ರೀತಿ ಆದರೆ ರೈತ ಹಿತ ರಕ್ಷಣಾ ವೇದಿಕೆ ಪ್ರತಿಭಟನೆ ಜರುಗಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದರು ( )
ನಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರಿಗೆ ಆಗುವ ತೊಂದರೆ ಕುರಿತು ಮಾಹಿತಿ ನಿಡಿದರು .
ಈ ಸಂದರ್ಭದಲ್ಲಿ ಕಬೀರ ಮಲ್ಲಿಕ, ಬಾಳಗೌಡ ಪಾಟೀಲ ಹಾಗೂ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ಸರ್ಕಾರದ ಯೋಜನೆಗಳನ್ನು ಗುತ್ತಿಗೆದಾರರು ಗುತ್ತಿಗೆ ಪಡೆದು ತಾವೆ ಕಾರ್ಯ ನಿರ್ವಹಿಸದೆ ಬೇರೆಯವರಿಗೆ ಹಸ್ತಾಂತರಿಸುವದರಿಂದ ಇಂತಹ ಅವಘಡಗಳು ಜರಗುತ್ತವೆ ಕಾರಣ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಕೋಳ್ಳಬೇಕು ಎಂದು ಜನರು ಆಡಿಕೋಳ್ಳುತ್ತಿದ್ದಾರೆ.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ..