ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ಕಾಡಂಚಿನಲ್ಲಿ ಶಿಥಿಲಾವಸ್ಥೆ ಯಲ್ಲಿರುವ ಜೋಡು ಶಿವ ಮಂದಿರಗಳನ್ನು ಸಂಬಂಧಪಟ್ಟ ಇಲಾಖೆಯವರು ಜೀರ್ಣೋದ್ಧಾರ ಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೌದು ಇವು ಸನಾತನ ಧರ್ಮದ ಕುರುಹುಗಳು ಇವು ಖಾನಾಪೂರ ತಾಲೂಕಿನ ಗೋಲ್ಯಾಳಿ ಗ್ರಾಮದ ಕಾಡಂಚಿನ ಮಧ್ಯೆ ಶಿಥಿಲಾವಸ್ಥೆಯಲ್ಲಿರುವ ಪ್ರಾಚಿನ ಕಾಲದ ಎರಡು ಅದ್ಬುತವಾದ ಮಂದಿರಗಳು. ಒಂದು ಶಿವಾಲಯ ಇನ್ನೊಂದು ರವಳನಾಥ ದೇವಸ್ಥಾನ. ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಈ ಮಂದಿರಗಳ ಜಿರ್ಣೋದ್ವಾರ ಮಾಡಿ ಪ್ರವಾಸಿಗರನ್ನು ಸೆಳೆಯಬೇಕಾದ ಅಗತ್ಯವಿದೆ. ಆದರೆ ವಿಪರ್ಯಾಸವೆಂದರೆ ಜಿಲ್ಲಾ ಕೇಂದ್ರದಿಂದ ಕೆಲವೇ ಮೈಲುಗಳ ಅಂತರದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಈ ಮಂದಿರಗಳನ್ನು ಸಂಭಂದಪಟ್ಟ ಇಲಾಖೆಯವರು ನಿರ್ಲಕ್ಷಿಸಿರುವುದು ಬೇಸರ ಮೂಡಿಸಿದೆ. ಕಾಡಂಚಿನ ಸೌಂದರ್ಯದ ಮಧ್ಯೆ ಮಂದಿರಗಳ ಪಕ್ಕದಲ್ಲೇ ನೈಸರ್ಗಿಕ ಝರಿ ಕೂಡಾ ಇದ್ದು ನೀರಿನ ಜುಳು ಜುಳು ಶಬ್ದ ನಿರಂತರವಾಗಿ ಕೇಳಿಬರುತ್ತದೆ ಅಲ್ಲಿಯೇ ಸುತ್ತ ಮುತ್ತ ಇರುವ ಮಾವು ಸೇರಿದಂತೆ ವೈವಿಧ್ಯಮಯವಾದ ಮರಗಳು ಮನಕ್ಕೆ ಮುದ ನೀಡುತ್ತವೆ.ಈ ಗೋಲ್ಯಾಳಿ ಕಾಡಂಚಿನ ಸೌಂದರ್ಯವನ್ನು ನೋಡಿದ ಪರಿಸರಪ್ರೇಮಿ ಆನಂದ ತಮ್ಮ ಮೋಬೈಲ್ ನಲ್ಲಿ ಈ ಅದ್ಭುತವಾದ ದೃಶ್ಯಗಳನ್ನು ಸೆರೆ ಹಿಡಿದು ನಮ್ಮ ಇನ್ ನ್ಯೂಸ್ ಗೆ ಕಳುಹಿಸಿದ್ದಾರೆ ಈ ನ್ಯೂಸ್ ನೋಡಿಯಾದರೂ ಇದಕ್ಕೆ ಸಂಭಂದಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿ ಕಾಡಂಚಿನಲ್ಲಿ ಇರುವ ಈ ಅದ್ಭುತವಾದ ಮಂದಿರಗಳನ್ನು ಜಿರ್ಣೋದ್ವಾರ ಮಾಡಲು ಮುಂದಾಗುತ್ತಾರಾ ಎಂಬುದನ್ನು ನಾವು ನೀವು ಕಾದು ನೋಡಬೇಕಿದೆ.