ಇತ್ತೀಚೆಗೆ ಕಾರ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಶ್ರೀಶೈಲ ಜಗದ್ಗುರುಗಳು ಭೇಟಿ ಮಾಡಿ ಆಶೀರ್ವದಿಸಿದರು. ಇಂದು ಬೆಳಗಾವಿ ನಗರದ ವಿಜಯಾ ಆಸ್ಪತ್ರೆಗೆ ಭೇಟಿ ನೀಡಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯ ವಿಚಾರಿಸಿ,
ಶೀಘ್ರ ಗುಣಮುಖರಾಗಿ ಜನಸೇವೆ ಮಾಡಲು ಮತ್ತೆ ಸಿದ್ದರಾಗುವಂತೆ ಆಶೀರ್ವದಿಸಿದರು.