Kagawad

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದಲ್ಲಿ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಮಂಗಳವಾರ ದಿನಾಕರಿಂದ ಐದು ದಿನ ವಿವಿಧ ಕಾರ್ಯಕ್ರಮಗಳಿಂದ.

Share

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವರ 55ನೇ ಜಾತ್ರಾ ಮಹೋತ್ಸವ ಹಾಗೂ 32ನೇ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಮಂಗಳವಾರ ರಿಂದ 5 ದಿನ ಜರಗಲಿದೆ.
ಐನಾಪುರ್ ಜಾತ್ರಾ ಕಮಿಟಿ ಕಾರ್ಯಧ್ಯಕ್ಷ ರಾಜುಗೌಡಾ ವಾಟೀಲ್ ಬೃಹತ್ ಕೃಷಿ ಮೇಳಾ ಹಾಗೂ ಜಾತ್ರೆ ಬಗ್ಗೆ ಮಾಹಿತಿ ನೀಡುತ್ತಿರುವಾಗ ಇದು ಮಕರ ಸಂಕ್ರಮನ ದಿನದಂದು ಕೆರಿ ಸಿದ್ದೇಶ್ವರ ದೇವರ ಜಾತ್ರೆ ಕಳೆದ 55 ವರ್ಷಗಳಿಂದ ಐನಾಪುರದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಸುಮಾರು 800 ವರ್ಷದ ಕೆರಿ ಸಿದ್ದೇಶ್ವರ ದೇವರ ಇತಿಹಾಸವಿದೆ. ಎಂದು ಹೇಳಿ ಜಾತ್ರೆ ದಿನದಂದು 11 ಗ್ರಾಮಗಳ ದೇವರ ಪಲ್ಲಕ್ಕಿ, ದೇವರ ಭೇಟಿ, ಭಕ್ತಿ ಪೂರ್ವಕವಾಗಿ ಜರಗುತಿದೆ.

ಇದರ ನಿಮಿತ್ತವಾಗಿ ಎರಡು ರಾಜ್ಯಗಳಿಂದ ಬೃಹತ್ ಕೃಷಿಮೇಳ ಕಾರ್ಯಕ್ರಮಕ್ಕೆ ದನಗಳ ಪ್ರದರ್ಶನ, ರೈತರ ಬಳಸುವ ವಿವಿಧ ಯಂತ್ರಗಳ ಪ್ರದರ್ಶನ, ಮಾರಾಟ, ಕೃಷಿಯಲ್ಲಿ ವಿಶೇಷ ಸಂಶೋಧನೆ ಮಾಡಿದ ಬಗ್ಗೆ ಕೃಷಿ ತಜ್ಞರಿಂದ ಉಪನ್ಯಾಸ ನೀಡುವ ಕಾರ್ಯಕ್ರಮ ಜರುಗಲಿದೆ.
ಇದರ ನಿಮಿತ್ಯವಾಗಿ ಶ್ವಾನಗಳ ಪ್ರದರ್ಶನೆ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಗುಂಡು ಕಲ್ಲ ಎತ್ತುವ ಸ್ಪರ್ಧೆ, ಒಂದು ಕುದುರೆ, ಒಂದು ಎತ್ತ, ಮತ್ತು ಎತ್ತಿನ ಗಾಡಿ ಸ್ಪರ್ಧೆ ಜರುಗಲಿದೆ.

ಸೋಮವಾರ ರಂದು ಸಂಜೆ ಐನಪುರ್ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮ ಇದರ ಅಧ್ಯಕ್ಷತೆ ಕಾಗವಾಡ ಶಾಸಕ ರಾಜು ಕಾಗೆ ವಯಸ್ಸಲ್ಲಿದ್ದಾರೆ, ಅತಿಥಿಗಳಾಗಿ ಚಿಕ್ಕೋಡಿ ಸಂಸದ ಶ್ರೀಮತಿ ಪ್ರಿಯಾಂಕ ಜಾರಕಿಹೊಳಿ, ಅಥಣಿ ಶಾಸಕ ಲಕ್ಷ್ಮಣ್ ಸವದಿ ಆಗಮಿಸಲಿದ್ದಾರೆ. ಐನಾಪುರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಸರೋಜಿನಿ ಗಾಣಿಗೇರ್, ಚಂದ್ರಶೇಖರ್ ಗಾಣಿಗೇರ್, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರಾಜುಗೌಡಾ ಪಾಟೀಲ್ ಹೇಳಿದರು.

ಈ ವೇಳೆ ಜಾತ್ರಾ ಕಮಿಟಿಯ ಉಪಾಧ್ಯಕ್ಷ ಹರ್ಷವರ್ಧನ್ ಪಾಟೀಲ್, ಕಾರ್ಯದರ್ಶಿ ಅಮಗೊಂಡ ವಡೆಯರ್, ಖಜಾಂಚಿ ಸುರೇಶ ಅಡಿಶೇರಿ, ಸುನಿಲ್ ಪಾಟೀಲ್, ಸಂತೋಷ ಪಾಟೀಲ್ ಸೇರಿದಂತೆ ಅನೇಕರು ಇದ್ದರು.

Tags:

error: Content is protected !!