ಕನ್ನಡ ಉಳಿಯಲು ಸಿದ್ಧಾರೂಢ ಪರಂಪರೆಯೂ ಸಹ ಕಾರಣವಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಇಂದು ಹುಕ್ಕೇರಿ ನಗರಕ್ಕೆ ಆಗಮಿಸಿದ ಸಿದ್ದಾರೂಢರ ಜ್ಯೋತಿ ಯಾತ್ರೆ ರಥವನ್ನು ಕೋರ್ಟ ಸರ್ಕಲ್ ಬಳಿ ಬರಮಾಡಿಕೊಂಡು ಗುರುಶಾಂತೇಶ್ವರ ಮಠಕ್ಕೆ ಕರೆ ತಂದರು. ನಂತರ ನಡೆದ ಸಮಾರಂಭದಲ್ಲಿವಿರಕ್ತ ಮಠದ ಶಿವಬಸವ ಮಹಾಸ್ವಾಮೀಜಿ, ಮತ್ತು ಕೊಟಬಾಗಿ ಕಲ್ಮಠದ ಸಿದ್ದಾರೂಢ ಆಶ್ರಮದ ಪ್ರಭುದೇವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಸಿದ್ದಾರೂಢ ಟ್ರಸ್ ಕಮಿಟಿ ಅದ್ಯಕ್ಷರಾದ ಬಸವರಾಜ ಕಲ್ಯಾಣಶೆಟ್ಟಿ,ಉಪಾದ್ಯಕ್ಷ ಮಂಜುನಾಥ ಮಳವಳ್ಳಿ, ಕಾರ್ಯದರ್ಶಿ ಶ್ರೀಮತಿ ಪಾಠಕ, ನಾಯಿಕ, ಶಾಮಾನಂದ ಪೂಜಾರಿ ಇವರನ್ನು ಸತ್ಕರಿಸಿ ಆಶಿರ್ವದಿಸಿದರು.
ನಂತರ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು , ಹುಬ್ಬಳ್ಳಿ ಸಿದ್ದಾರೂಢ ಪರಂಪರೆಯು ಕೈವಲ್ಯ ಪದ ಬಳಿಸಿ ನಿಜಗುಣ ಸಾಹಿತ್ಯವನ್ನು ಉತ್ತರ ಕರ್ನಾಟಕ್ಕೆ ಪರಿಚಯಿಸಿ ಕನ್ನಡ ಭಾಷೆ ಉಳಿಯಲು ಕಾರಣಿಭೂತವಾಗಿದೆ ಅವರ ಜ್ಯೋತಿ ಯಾತ್ರೆಯ ರಥವು ನಮ್ಮ ಹುಕ್ಕೇರಿ ಮಠಕ್ಕೆ ಆಗಮಿಸಿದ್ದು ನಮಗೆ ಸಂತೋಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಚಂದ್ರಶೇಖರ ಮಹಾಸ್ವಾಮಿಗಳು ಪ್ರಯಾಗ ರಾಜ್ಯದ ಕುಂಭ ಮೇಳದ ತ್ರೀವೇಣಿ ಸಂಗಮದ ತೀರ್ಥವನ್ನು ಭಕ್ತರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಬೆಳವಿಯ ಸಿದ್ದಾರೂಢ ಮಠದ ಮೃತ್ಯುಂಜಯ ಸ್ವಾಮಿಗಳು,
ನಗರದ ಗಣ್ಯರಾದ ಪಿಂಟು ಶೆಟ್ಟಿ, ಚಂದ್ರಶೇಖರ ಪಾಟೀಲ, ಕೆ ಬಿ ಬಂದಾಯಿ, ಚನ್ನಪ್ಪ ಗಜಬರ, ಸೋಮ ಪರಕನಟ್ಟಿ, ಓಂಕಾರ ಹೆದ್ದೂರಶೆಟ್ಟಿ, ರವಿ ಪರಕನಟ್ಟಿ, ಅಶೋಕ ಹಿರೇಮಠ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.