ಸಮಾಜದಲ್ಲಿ ಅನೇಕರು ಆಸ್ತಿವಂತ ಇದ್ದರು ಶಿಕ್ಷಣಕ್ಕಾಗಿ ದಾನ ನೀಡುವವರು ವಿರಳ ಆದರೆ ಶೇಡಬಾಳ ಪಟ್ಟಣದ ಒಬ್ಬ ಛಾಯಾ ಗ್ರಾಹಕ ಪುಷ್ಪದಂತ ಉಪಾಧ್ಯೆ ತಾನು ಕಲಿತ ಶಾಲೆಗೆ ತಂದೆಯ ಹೆಸರಿನಲ್ಲಿ ೫ ಲಕ್ಷ ರೂ ವೆಚ್ಚದ ಕೋಣೆ ಕಟ್ಟಿಸಿ ಕೊಟ್ಟಿದ್ದು ಇದು ಒಂದು ಅಪರೂಪದ ಶೈಕ್ಷಣಿಕ ಸೇವೆ ಎಂದು ಹುಕ್ಕೇರಿಯ ಸುಕ್ಷೇತ್ರ ಕ್ಯಾರಗುಡ್ಡಮಠದ ಶ್ರೀಮದ್ ಅಭಿನವ ಮಂಜುನಾಥ ಸ್ವಾಮಿಜಿಗಳು ಹೇಳಿದರು.
ಶುಕ್ರವಾರ ಸಂಜೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಕೃಷ್ಣಾ ಶಿಕ್ಷಣ ಅಭಿವೃದ್ದಿ ಸಮಿತ ಈ ಸಂಸ್ಥೆಯಲ್ಲಿ ವಾರ್ಷಿಕ ಸಭೆ ಜರುಗಿತು. ಈ ಸಭೆಯಲ್ಲಿ ಪುಷ್ಪದಂತ ಉಪಾಧ್ಯೆ ದಂಪತಿಗಳನ್ನು ಸನ್ಮಾನಿಸಿ ಸ್ವಾಮಿಜಿ ಮಾತನಾಡಿದರು.
ಸ್ವಾಮಿಜಿ ಮುಂದುವರೆದು ಮಾತನಾಡುವಾಗ ಛಾಯಾ ಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಾ ತನ್ನ ಕುಟುಂಬದ ಬೇಡಿಕೆಗಳು ನಿರ್ವಹಿಸುತ್ತಾ ಅಲ್ಪ ಸ್ವಲ್ಪ ಹಣ ಸಂಗ್ರಹಿಸಿ ನಾನು ಕಲಿತ ಶಾಲೆಗೆ ಕೋಣೆ ಕಟ್ಟಿಸಿ ಇನ್ನು ಉಳಿದ ಅಧ್ಯಯನ ಮಡಲು ತಮ್ಮ ತಂದೆ ಧರನೇಂದ್ರ ಉಪಾಧ್ಯೆ ಇವರ ಹೆಸರಿನಲ್ಲಿ ೫ ಲಕ್ಷ ರೂಪಾಯಿ ದಾನವಾಗಿ ನೀಡಿದ್ದು ಸಮಾಜದಲ್ಲಿಯ ಇನ್ನು ಉಳಿದ ಯುವಕರಿಗೆ ಶಿಕ್ಷಣ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ ಇದು ಒಂದು ಅಪರೂಪದ ಸೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಛಾಯಾ ಗ್ರಾಹಕ ಪುಷ್ಪದಂತ ಉಪಾಧ್ಯೆ ಮಾತನಾಡುವಾಗ ನಾನೇನು ಅಷ್ಟೇನು ಶ್ರೀಮಂತನಲ್ಲ ಆದರೆ ನಾನು ಕಲಿತ ಶಾಲೆಗೆ ನನ್ನಿಂದ ಏನಾದರು ಸಹಾಯ ಮಾಡುವ ಭಾವನೆಯಿಂದ ನನ್ನ ತಂದೆ ಧರನೇಂದ್ರ ಉಪಾಧ್ಯೆ ಇವರ ಹೆಸರಿನಲ್ಲಿ ೫ ಲಕ್ಷ ರೂಪಾಯಿ ವೆಚ್ಚ ಮಾಡಿ ಕೋಣೆ ಕಟ್ಟಿಸಿದ್ದೇನೆ ತಂದೆ ತಾಯಿ ಕಳೆದುಕೊಂಡ ನಾನು ನನಗೆ ಆಗುವ ನೋವು ಅಧಿಕವಿದೆ ಸಮಾಜದಲ್ಲಿಯ ಯುವಕರು ತಮ್ಮ ತಂದೆ ತಾಯಿಗಳಿಗೆ ತಿರಸ್ಕರಿಸದೆ ಅವರ ಸೇವೆ ಮಾಡಿ ದೇವರು ಎಲ್ಲೇ ಇಲ್ಲ ಜನ್ಮ ನೀಡಿದ ತಂದೆ ತಾಯಿಗಳಲ್ಲಿ ಇದ್ದಾನೆ ಎಂದು ಭಾವುಕವಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ಡಾ// ಅಶೊಕ ಪಾಟೀಲ ವಹಿಸಿದರು ಮುಖ್ಯ ಅಥಿತಿಗಳಾಗಿ ಬೆಂಗೆಳೂರಿನ ಸ್ಟೇಟ್ ಬ್ಯಾಂಕ ಇಂಡಿಯಾ ನಿವೃತ್ತ ವವ್ಯಸ್ಥಾಪಕ ಸೋಮಶೇಖರ ಬೆಳಲದೆವರು, ದಾವಣಗೆರಿಯ ರ್ರೋಟರಿ ಕ್ಲಬ್ ಸದಸ್ಯ ಶ್ರೀ ಬ್ರಹ್ಮ ಪ್ರಕಾಶ ಪಿ, ಸಂಸ್ಥೆಯ ಕಾರ್ಯದರ್ಶಿ ಜಿನ್ನಪ್ಪ ಅಣ್ಣಾ ನಾಂದನಿ ಸಂಸ್ಥೆಯ ಸಮಚಾಲಕರು, ಪಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ