Hukkeri

ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಅದ್ಯಯನ ಅವಶ್ಯ – ಸಚಿವ ಎನ್ ಭೋಸರಾಜು.

Share

ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ನದ ಬಗ್ಗೆ ಆಸಕ್ತಿ ಬೆಳೆಸುವದರ ಜೋತೆಗೆ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೆಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ನಾನ ,ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದರು.

ಅವರು ಇಂದು ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿ ಹಮ್ಮಿಕೊಂಡ ಮಿನಿ ತಾರಾಲಯ ಕಟ್ಟಡಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಜ್ನಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸಲು ಕೈ ಗೊಂಡಿರುವ ಯೋಜನೆಗಳ ಅಡಿಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಆವರಣದಲ್ಲಿ ನಿರ್ಮಿಸಲಾಗುತ್ತಿದೆ ಎಂದರು

ನಂತರ ನಡೆದ ಕಾರ್ಯಕ್ರಮದಲ್ಲಿ ಉದ್ಯಾನ ಕಾಶಿ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜಶೇಖರ ಪಾಟೀಲ ಗಣ್ಯರನ್ನು ಸ್ವಾಗತಿಸಿದರೆ ಗುತ್ತಿಗೆದಾರರಾದ ಬಸವರಾಜ ಮಟಗಾರ ಮತ್ತು ಪುಂಡಲೀಕ ನಂದಗಾವಿ ಸತ್ಕರಿಸಿ ಅಭಿನಂದಿಸಿದರು,
ವೇದಿಕೆ ಮೇಲೆ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಬಿ ಆರ್ ರಾಠೋಡ, ಅಧಿಕ್ಷಕ ಎಮ್ ಎಲ್ ಗಣಿ, ಆರ್ ವಿ ತಾಳೂರ, ಬೆಳಗಾವಿ ಯೋಜನಾಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿವಾರ್ ಮಲ್ಲಾಡದ, ತಹಸಿಲ್ದಾರ ಮಂಜುಳಾ ನಾಯಿಕ, ಕಲಗೌಡ ಪಾಟೀಲ ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ಮಾತನಾಡಿ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಹಂತ ಹಂತವಾಗಿ ಪೂರ್ಣ ಗೋಳಿಸಿಲಾಗುವದು , ಹಿಡಕಲ್ ಜಲಾಶಯವನ್ನು ಮೈಸೂರು ಮಾದರಿಯಲ್ಲಿ ಪ್ರವಾಸಿ ಸ್ಥಾನವನ್ನಾಗಿ ಮಾಡಲಾಗುವದು ಅದೆ ರೀತಿ ಈ ಭಾಗದ ವಿವಿಧ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುವದು ಎಂದರು.
ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಮಾತನಾಡಿ ಹಿಡಕಲ್ ಜಲಾಶಯದಲ್ಲಿ ಉದ್ಯಾನ ಕಾಶಿ ನಿರ್ಮಾನಕ್ಕೆ ನಮ್ಮ ತಂದೆಯವರಾದ ಉಮೇಶ ಕತ್ತಿ ಯವರ ಕನಸಿನ ಯೋಜನೆ ಹಂತ ಹಂತವಾಗಿ ಅಭಿವೃದ್ಧಿ ಯಾಗುತ್ತಿದೆ ಅದರಂತೆ ಇಂದು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅನಕೂಲ ವಾಗುವ ದೃಷ್ಟಿಯಿಂದ ತಾರಾಲಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ಯಾಗಿದ್ದು ಸಂತೋಷವಾಗಿದೆ ಎಂದರು .
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಬಸವರಾಜ ಮಟಗಾರ ಅಭಿಮಾನಿಗಳು ,ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!