ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಸಂಕ್ರಾಂತಿ ಸಂಭ್ರಮವನ್ನು ಅತ್ಯಂತ ಉತ್ಸಾಹದಿಂದ ಹಳ್ಳಿಯ ಸೊಗಡಿನಲ್ಲಿ ಆಚರಿಸಲಾಯಿತು.

ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಹಿರಣ್ಯಕೇಶಿ ನದಿ ದಂಡೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಹಳ್ಳಿಯ ಸೊಗಡಿನಲ್ಲಿ ಆಚರಿಸಲಾಯಿತು. ಮೊದಲಿಗೆ ಸುಮಾರು 100 ರಿಂದ 200 ಜನ ಮಹಿಳೆಯರು ಬಡಕುಂದ್ರಿ ಶ್ರೀ ಹೊಳೆಮ್ಮಾದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿ ನಂತರ ಎತ್ತಿನ ಬಂಡಿಯ ಮೂಲಕ ಗೌಡವಾಡ ಗ್ರಾಮದ ಹಿರಣ್ಯಕೇಶಿ ನದಿ ದಂಡೆಗೆ ಬಂದು , ಪ್ರಯಾಗರಾಜದಿಂದ ತಂದ ಗಂಗೆಯನ್ನು ಹಿರಣ್ಯಕೇಶಿ ನದಿಗೆ ಸಂಗಮಿಸಿ ಕುಂಭಮೇಳವನ್ನ ನಡೆಸಿದರು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಸುನೀತಾ ಪಾಟೀಲ್, ಕಾರ್ಯದರ್ಶಿ ಶಾರದಾ ಪಾಟೀಲ್ ಹಾಗೂ ಸಹಕಾರ್ಯದರ್ಶಿ ವಿದ್ಯಾ ಗೌಡ್, ನಂದಾ ಲೋಕನ್ನವರ ನೇತೃತ್ವದಲ್ಲಿ ಹೆಜ್ಜೆ ಹಾಕಿ ಸುಗ್ಗಿಯ ಸಂಭ್ರಮವನ್ನು ಆನಂದಿ ಭೋಜನ ಮಾಡಲಾಯಿತು.
ಈ ವೇಳೆ ಶೈಲಜಾ ಭಿಂಗೆ, ಜಯಶೀಲಾ ಬ್ಯಾಕೋಡ್, ರತ್ನಪ್ರಭಾ ಬೆಲ್ಲದ, ಅನುರಾಧಾ ಬಾಗಿ, ಜ್ಯೋತಿ ಬದಾಮಿ, ಸುರೇಖಾ ಮಾನ್ವಿ, ಸುಮಂಗಲಾ ಕಾದ್ರೋಳ್ಳಿ, ಭಾರತಿ ಮಠದ ಇನ್ನುಳಿದವರು ಭಾಗಿಯಾಗಿದ್ಧರು.