ರಾಜ್ಯದಲ್ಲೆ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಸಂಕೋಣಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ

ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಅಥಣಿ ಶಾಸಕ ಲಕ್ಷ್ಮಣ ಸವದಿ ಆಪ್ತ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದು ರಮೇಶ ಜಾರಕಿಹೊಳಿ ಆಪ್ತನಿಗೆ ಹಿನ್ನಡೆಯಾಗಿದೆ.
ತೀವ್ರ ಕೂತಹುಲ ಮೂಡಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ 56 ಸದಸ್ಯರ ಪೈಕಿ 53 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಆಪ್ತ ಸಂತೋಷ ಕಕಮರಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಶಂಕರ ರಾಮು ಗಡದೆ ಅಧ್ಯಕ್ಷ ಸ್ಥಾನದ ಆಕಾಂಕ್ಷೆಗಳ ಪಟ್ಟಿಯಲ್ಲಿದ್ದರು.ಇವುಗಳ ಪೈಕಿ ಸವದಿ ಆಪ್ತ ಶಂಕರ ರಾಮು ಗಡದೆ ಪರವಾಗಿ 43 ಸದಸ್ಯರು ಮತ ಚಲಾಯಿಸಿದ್ದು ಗೆದ್ದು ಬಿಗಿದ್ದಾರೆ.
ಕಳೆದ ಒಂದು ತಿಂಗಳಿಂದ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ರೆಸಾರ್ಟ್ ರಾಜಕಾರಣ ನಡೆದಿತ್ತು ಯನ್ನಲಾಗಿದೆ.ತೀವ್ರ ಸೇನೆಸಾಟದ ಮದ್ಯ ಸವದಿ ಆಪ್ತನಿಗೆ ಜಯ ಸಿಕ್ಕಿದ್ದು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.