ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ರಾಹುಲ್ ಸತೀಶಣ್ಣಾ ಜಾರಕಿಹೊಳಿ ಟ್ರಾಫಿ 2025, ಬೆಳಗಾವಿ ಗ್ರಾಮೀಣ ಕ್ರಿಕೇಟ್ ಲೀಗಗೆ ವಿದ್ಯುಕ್ತವಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮೈದಾನದಲ್ಲಿ ರಾಹುಲ್ ಸತೀಶಣ್ಣಾ ಜಾರಕಿಹೊಳಿ ಟ್ರಾಫಿ 2025, ಬೆಳಗಾವಿ ಗ್ರಾಮೀಣ ಕ್ರಿಕೇಟ್ ಲೀಗಗೆ ವಿದ್ಯುಕ್ತವಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು. ಈ ವೇಳೆ ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ,ಮಾಜಿ ಜಿ.ಪಂ.ಉಪಾಧ್ಯಕ್ಷ ಅರುಣ ಕಟಾಂಬಳೆ,ಮಾಜಿ ಜಿ.ಪಂ.ಸದಸ್ಯ ಉದಯ ಸಿದ್ದಣ್ಣವರ,ಮಾರ್ಕಂಡೆಯ ಸುಗರ್ ಸಂಚಾಲಕ ಬಸವಂತ ಮಾಯಾಣ್ಣಾಚೆ,ಗ್ರಾ.ಪಂಸದಸ್ಯರು ಗಳಾದ ಗೌಡಾಪ್ಪ ಪಾಟೀಲ,ರಾಜು ಕುಟ್ರೆ,ದಿಪಾ ಮರಗಾಳೆ,ದತ್ತಾ ಸುತಾರ,ಸುನಿಲ ಪಾವಣೊಜಿ,ಸಿದ್ಧಾಪ್ಪ ಶಹಾಪುರಕರ,ಬಾಬು ಬಡಿಗೆರ,ಲಕ್ಷ್ಮಿ ಕುಟ್ತೆ,ಪ್ರೆಮಾ ನರೋಟಿ,ರೆಖಾ ನರೋಟಿ,ಭಾರತಿ ಚವ್ಹಾಣ ಸುರೆಖಾ ಪವಾರ,ಶ್ರೀದೇವಿ ಪಾಟೀಲ ಸೇರಿದಂತೆ ಇನ್ನುಳಿದ ಗಣ್ಯರು ಭಾಗಿಯಾಗಿದ್ಧರು.
ಈ ವೇಳೆ ಮಾತನಾಡಿದ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಹಲವಾರು ವರ್ಷಗಳಿಂದ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರಿಂದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಹಾಯ ಮಾಡಲಾಗುತ್ತಿದೆ. ಅದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾದ ತರಬೇತಿಯನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಅನುದಾನವನ್ನು ತಂದು ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿಯೂ ಕ್ರಿಕೇಟ್ ಟೂರ್ನಾಮೆಂಟಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯ ಟೂರ್ನಾಮೆಂಟ ಕೂಡ ಯಶಸ್ವಿಯಾಗಿ ನಡೆಯಲಿ ಎಂದರು.
ಈ ವೇಳೆ ಮಾರ್ಕಂಡೇಯ ಶುಗರ್ಸನ ಸಂಚಾಲಕರಾದ ಬಸವಂತ ಮಾಯಾಣ್ಣಾಚೆ ಮತ್ತು ಮುಂಬಯಿ ಪೊಲೀಸ್ ಅಧಿಕಾರಿ ಸುಭಾಷ ಮ್ಯಾಗೆರಿ ಹಾಗೂ ಪಿಡಿಒ ಕೃಷ್ಣಾಬಾಯಿ ಭಂಡಾರಿಯವರು ಮಾತನಾಡಿ ಕಡೋಲಿ ಗ್ರಾಮವೂ ಎಲ್ಲ ಪ್ರಕಾರದ ಕ್ರೀಡೆಗಳಿಗೆ ಖ್ಯಾತಿಯನ್ನು ಪಡೆದಿದೆ. ಕಡೋಲಿ ಗ್ರಾಮದಲ್ಲಿ ರಾಜ್ಯಮಟ್ಟದ ಪಟುಗಳು ನಿರ್ಮಾಣಗೊಳ್ಳುತ್ತಿದ್ದಾರೆ. ಗ್ರಾಮದಲ್ಲಿರುವ ಈ ಮೈದಾನವನ್ನು ಅಭಿವೃದ್ಧಿ ಪಡಿಸಿ ಕ್ರೀಡಾಳುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಒಟ್ಟು ಹದನೈದು ತಂಡಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲನೇಯ ಬಹುಮಾನ ೫೧ ಸಾವಿರ ಹಾಗು ಎರಡನೇಯ ೨೫ ಸಾವಿರ ಕೊಡಲಾಗುತ್ತಿದೆ.