Belagavi

ಕಾಂಗ್ರೆಸ್ ಸಮಾವೇಶಕ್ಕೆ ಬಾರದ ರಾಹುಲ್ ಗಾಂಧಿ….

Share

 

ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರಿಗೆ ಹುಷಾರಿಲ್ಲದ ಕಾರಣ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂದರು. ರಾಹುಲ್ ಗಾಂಧಿ ಸಮಾವೇಶದಿಂದ ದೂರ ಎಂದು ಸುದ್ಧಿಗಳನ್ನು ಭಿತ್ತರಿಸಬೇಡಿ. ಕಾಂಗ್ರೆಸ ಸಂವಿಧಾನದ ಪರವಾಗಿದ್ದರೇ, ಬಿಜೆಪಿ ಮನುವಾದದ ಪರವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರಿಗೆ ಹುಷಾರಿಲ್ಲದ ಕಾರಣ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂದರು. ರಾಹುಲ್ ಗಾಂಧಿ ಸಮಾವೇಶದಿಂದ ದೂರ ಎಂದು ಸುದ್ಧಿಗಳನ್ನು ಭಿತ್ತರಿಸಬೇಡಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭಾ ಸದಸ್ಯೆ ಪ್ರಿಯಂಕಾ ಗಾಂಧಿ ಇನ್ನುಳಿದವರು ಆಗಮಿಸಲಿದ್ದಾರೆಂದು ಸ್ಪಷ್ಟಪಡಿಸಿದರು. ಬೈಟ್

ವರ್ಷವಿಡಿ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಅಭಿಯಾನವನ್ನು ನಡೆಸಲಾಗುವುದು. ಮಹಾತ್ಮಾ ಗಾಂಧಿಜೀಯವರ ತತ್ವಾದರ್ಶಗಳು ಜನರಿಂದ ದೂರವಾಗುತ್ತಿದ್ದು, ಅವುಗಳನ್ನು ಮತ್ತೇ ಪುನಃಸ್ಥಾಪನೆ ಮಾಡಲಾಗುವುದು. ಮಹಾತ್ಮಾ ಗಾಂಧಿಜೀಯವರ ವಿಚಾರಗಳು ಇಂದಿಗೂ ಪ್ರಸ್ತುತ. ಸೌಹಾರ್ದತೆ, ಸಮಾನತೆ ಬರಬೇಕು. ಅಸ್ಪೃಶ್ಯತೆ ಹೊಗಲಾಡಿಸಬೇಕು. ಮಹಿಳೆಯರಿಗೆ ಸ್ವಾತಂತ್ರ್ಯವಿರಬೇಕು. ಮಹಿಳಾ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದನೆ ಮಾಡಿದ್ದಾರೆ. ಸಂವಿಧಾನದಲ್ಲಿ ಮಹಾತ್ಮಾ ಗಾಂಧಿಜೀ, ವಿಶ್ವಗುರು ಬಸವಣ್ಣ, ಭಕ್ತ ಕನಕದಾಸರು ಇನ್ನುಳಿದ ಮಹಾತ್ಮರು ಹೇಳಿದ ವಿಚಾರಗಳಿವೆ. ಆದರೀಗ ಡಾ. ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಕೃತ್ಯಗಳು ನಡೆಯುತ್ತಿವೆ. ಇದನ್ನು ರಕ್ಷಣೆ ಮಾಡುವುದು ಕಾಂಗ್ರೆಸ್ಸಿನ ಜವಾಬ್ದಾರಿ. ಕಾಂಗ್ರೆಸ ಸಂವಿಧಾನದ ಪರವಾಗಿದ್ದರೇ, ಬಿಜೆಪಿ ಮನುವಾದದ ಪರವಾಗಿದೆ ಎಂದರು. ಬೈಟ್

ಇನ್ನು ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದರು

Tags:

error: Content is protected !!