Chikkodi

ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

Share

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ಬೆಳಗಾವಿ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಅಲ್ಪಸಂಕ್ಯಾತರ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಸಂಘಗಳಲ್ಲಿ ಕಳೆದ ೨೦ ವರ್ಷಗಳಿಂದ ಕಡಿಮ ಸಂಬಳದಲ್ಲಿ ನಿಲಯ ಹಾಗೂ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು ಅಡುಗೆ ಸಹಾಯಕರು, ಸವಚ್ಚತಾಗಾರರು ಕಾವಲುಗಾರರು, ಡಿ.ಗ್ರೂಪ್ ಅಟೆಂಡರ್ ಕಂಪೂಟರ್ ಡಾಟಾ ಎಂಟ್ರಿ ಮತ್ತು ಅತಿಥಿ ಶಿಕ್ಷಕರುಈ ಸ್ಟಾಪ್ ನರ್ಸಗಳು ದಿನಗೂಲಿ ನೌಕರರು ಹೊರಗುತ್ತಿಗೆ ಆದಾರದ ಮೇಲೆ ಅವರು ಕಾರ್ಯ ಮಾಡುತ್ತಿದ್ದಾರೆ.

ಅವರಿಗೆ ಯಾವುದೆ ಭದ್ರತೆಯಿಲ್ಲದೆ ಅವರು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಪ್ರತಿ ನಿತ್ಯ ಗುತ್ತಿಗೆದಾರರು ಹಾಗೂ ವಾರ್ಡನಗಳು ಹಾಗೂ ತಾಲೂಕಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಪ್ರತಿ ನಿತ್ಯ ಶೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಇಂತಹ ಸಂಕಷ್ಟದಲ್ಲೆ ನೌಕರರು ಒತ್ತಡದಲ್ಲಿ ಕಾರ್ಯ ಮಾಡುವಂತಾಗಿದೆ. ಅದಕ್ಕಾಗಿ ಕೂಡಲೇ ನೌಕರರಿಗೆ ಸರಕಾರ ತಿಂಗಳಿಗೆ ಕನಿಷ್ಠ ೩೧ ಸಾವಿರ, ನೇರವಾಗಿ ಇಲಾಖೆಯಿಂದ ವೇತನ ಜಮಾ ಮಾಡಬೇಕು, ನಿವೃತ್ತರಿಗೆ ಸೇವಾ ಭದ್ರತೆ ನೀಡಬೇಕು. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ನೀಡಬೇಕು.ಬೀದರ ಜಿಲ್ಲೆ ಮಾದರಿಯನ್ನು ಜಿಲ್ಲಾ ಸೇವೆಗಳ ವಿವಿಧೋದ್ದೆಶ ಸಹಕಾರ ಸಂಘವನ್ನು ರಾಜ್ಯ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು. ಹಿಂದುಳಿದ ವರ್ಗಗಳ,ಸಮಾಝ, ಅಲ್ಪಸಮಖ್ಯಾರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕಡಿತ ಮಾಡಲಾಗಿರುವ ಆದೇಶ ಹಿಂದಕ್ಕೆ ಪಡೆಯಬೇಕು. ಪ್ರತಿ ತಿಂಗಳು ೫ರೊಳಗಾಗಿ ವೇತನ ಜಮಾ ಮಾಡಬೇಕು. ಈಗಾಗಲೇ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಅಡುಗೆಯರಿಂದ ಶೌಚಾಲಯ ಸ್ವಚ್ಚ ಮಾಡಿಸಬಾರದು. ನಿವೃತ್ತಿ ನಂತರ ಜೀವನ ನಿರ್ವಹನೆಗಾಗಿ ನೌಕರರಿಗೆ ೧೦ಲಕ್ಷ ರೂಗಳನ್ನು ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಲಕ್ಕಪ್ಪಾ ಕಾಂಬಳೆ, ಪ್ರದೀಪ ದಳವಾಯಿ, ಬಸವರಾಜ ಪಾಟೀಲ, ಕುನಾಲ್ ಸುತ್ತಳೆ,ಭಜರಂಗ ಕಾಂಬಳೆ, ಶ್ರೀಕಾಂತ ಸಣ್ಣಕ್ಕಿ,ತುಕಾರಾಮ ಖೋತ,ರಾಜು ಮೇರೆನ್ನವರ, ಮುಬಾರಕ ನದಾಫ,ಶಿವಾಜಿ ಪವಾರ, ರಾಹುಲ್ ಕಾಂಬಳೆ, ಕಲ್ಪನಾ ವಾಳಕೆ, ಮಲ್ಲಪ್ಪಾ ಬಾತಮರೆ, ಬಾಹುಬಲಿ ಪಾಟೀಲ, ರವಿ ಕಾಂಬಳೆ ಇತರರು ಭಾಗವಹಿಸಿದ್ದರು.

Tags:

error: Content is protected !!